ಮುಂಬೈ: ಐಪಿಎಲ್ ಟಿ-20 ಟೂರ್ನಿಯ ಪಂಜಾಬ್ ಕಿಂಗ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ರೋಚಕ ಜಯ ಸಾಧಿಸಿತು. ಪಂದ್ಯ ಗೆದ್ದ ಬೆನ್ನಲ್ಲೇ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ (Virat kohli) ತನ್ನ ಫ್ಯಾಮಿಲಿ ಸದಸ್ಯರಿಗೆ ವೀಡಿಯೋ ಕರೆ ಮಾಡಿ ಮಾತನಾಡುತ್ತಿರುವ ದೃಶ್ಯವು ಎಲ್ಲೆಡೆ ವೈರಲ್ ಆಗಿದೆ.
ಸೋಮವಾರದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್ ಕೊಹ್ಲಿ 77 ರನ್ ಸಿಡಿಸಿ ಮಿಂಚಿದ್ದರು. ಕೊಹ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶನವೂ ತಂಡದ ಗೆಲುವಿಗೆ ನೆರವಾಯಿತು. ಪಂದ್ಯ ಮುಗಿದ ಕೂಡಲೇ ಮನೆಯವರಿಗೆ ಕರೆ ಮಾಡಿದ್ದರಿಂದ ಅವರ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಇದನ್ನೂ ಓದಿ: ಕೊಹ್ಲಿ, ಕಾರ್ತಿಕ್, ಮಹಿಪಾಲ್ ಸ್ಫೋಟಕ ಆಟ – ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ
Virat Kohli’s post match video call emphasizes what matters most in life- “FAMILY”#ViratKohli???? #RCBvPBKS #IPL24 pic.twitter.com/P8j1Mbbq8h
— Extra Slip (@extra_slip) March 25, 2024
ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಚೆಗಷ್ಟೇ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗುವಿಗೆ ‘ಅಕಾಯ್’ ಎಂದು ವಿರುಷ್ಕಾ ಹೆಸರಿಟ್ಟಿದ್ದಾರೆ.
ವಿರಾಟ್ ಕೊಹ್ಲಿ ಸ್ಫೋಟಕ ಅರ್ಧಶತಕ ಮತ್ತು ಕೊನೆಯಲ್ಲಿ ಕಾರ್ತಿಕ್ (Dinesh Karthik), ಮಹಿಪಾಲ್ (Mahipal Lomror) ಅವರ ಸಿಕ್ಸರ್ ಬೌಂಡರಿ ನೆರವಿನಿಂದ ಆರ್‌ಸಿಬಿ (RCB) ತವರಿನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಇದನ್ನೂ ಓದಿ: ಪಂದ್ಯದ ವೇಳೆ ಕ್ರೀಸ್‌ಗೆ ನುಗ್ಗಿ ಕೊಹ್ಲಿ ಕಾಲು ಹಿಡಿದ ಆರ್‌ಸಿಬಿ ಅಭಿಮಾನಿ ವಶಕ್ಕೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 177 ರನ್‌ಗಳ ಕಠಿಣ ಗುರಿಯನ್ನು ಪಡೆದ್ದಿದ್ದ ಆರ್‌ಸಿಬಿ ಇನ್ನೂ 4 ಎಸೆತ ಬಾಕಿ ಇರುವಂತೆಯೇ 6 ವಿಕೆಟ್ ನಷ್ಟಕ್ಕೆ 178 ರನ್ ಹೊಡೆದು ಮೊದಲ ಜಯ ದಾಖಲಿಸಿತು.