ಮುಂಬೈ: ದಾಖಲೆ ಮೇಲೆ ದಾಖಲೆ ನಿರ್ಮಿಸುತ್ತಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು (World Record) ಮುರಿದಿದ್ದಾರೆ.
ಒಟ್ಟು 10 ಪಂದ್ಯಗಳಿಂದ 711 ರನ್‌ಗಳಿಸುವ ಮೂಲಕ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಸಚಿನ್ 2003ರ ವಿಶ್ವಕಪ್‌ನಲ್ಲಿ 673 ರನ್ ಹೊಡೆದಿದ್ದರು.
Advertisement
Advertisement
673 ರನ್ ಸಿಡಿಸುವ ಮೂಲಕ ವಿಶ್ವಕಪ್ (World Cup Cricket) ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2003ರಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತರೂ ಸಚಿನ್ ಅವರ ಅತ್ಯುತ್ತಮ ಆಟಕ್ಕೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿತ್ತು. ಇದನ್ನೂ ಓದಿ: World Cup Semifinal: ಕ್ರಿಕೆಟ್ ದೇವರ ಶತಕಗಳ ದಾಖಲೆ ನುಚ್ಚುನೂರು ಮಾಡಿದ ಕಿಂಗ್ ಕೊಹ್ಲಿ
Advertisement
ಈ ಸಾಧನೆ ನಿರ್ಮಿಸಿ 20 ವರ್ಷ ಕಳೆದರೂ ಈ ದಾಖಲೆ ಇನ್ನೂ ಸಚಿನ್ ಹೆಸರಿನಲ್ಲೇ ಇತ್ತು. ಸಚಿನ್ 11 ಪಂದ್ಯಗಳಿಂದ ಈ ದಾಖಲೆ ನಿರ್ಮಿಸಿದ್ದರೆ ಕೊಹ್ಲಿ 10 ಪಂದ್ಯಗಳಿಂದ 700 ರನ್‌ಗಳ ಗಡಿಯನ್ನು ದಾಟಿದ್ದಾರೆ.
Advertisement
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 106 ಎಸೆತಗಳಲ್ಲಿ 8 ಬೌಂಡರಿ 1 ಸಿಕ್ಸರ್‌ನೊಂದಿಗೆ ಶತಕ ಸಿಡಿಸಿ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. ಅಂತಿಮವಾಗಿ ಕೊಹ್ಲಿ 117 ರನ್ (113 ಎಸೆತ, 9 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟಾದರು.
View this post on Instagram
ಸದ್ಯ ಈ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 591 ರನ್, ನ್ಯೂಜಿಲೆಂಡಿನ ರಚಿನ್ ರವೀಂದ್ರ 565 ರನ್, ರೋಹಿತ್ ಶರ್ಮಾ 550 ರನ್ ಹೊಡೆದಿದ್ದಾರೆ.
ಅತಿ ಹೆಚ್ಚು ರನ್ ಹೊಡೆದ ಆಟಗಾರರು:
ವಿರಾಟ್ ಕೊಹ್ಲಿ 711 ರನ್, ಸಚಿನ್ ತೆಂಡೂಲ್ಕರ್ 673 ರನ್ (2003), ಮಾಥ್ಯೂ ಹೇಡನ್ 659 ರನ್ (2007), ರೋಹಿತ್ ಶರ್ಮಾ 648 ರನ್ (2019)