Cricket

ದ್ವಿಶತಕ ಸಿಡಿಸಿ ಕೊಹ್ಲಿಯಿಂದ ಮತ್ತೊಂದು ದಾಖಲೆ ನಿರ್ಮಾಣ

Published

on

Share this

ಹೈದರಾಬಾದ್: ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‍ನ ಸತತ ನಾಲ್ಕು ಸರಣಿಯಲ್ಲಿ 4 ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಹೌದು. ಜೂನ್ ತಿಂಗಳಿನಲ್ಲಿ ದ್ವಿಶತಕ ಬಾರಿಸಲು ಆರಂಭಿಸಿದ ಬಳಿಕ ಕೊಹ್ಲಿ ತಾನು ಆಡಿದ ಎಲ್ಲ ಸರಣಿಯಲ್ಲಿ ಒಂದೊಂದು ದ್ವಿಶತಕ ಹೊಡೆದಿರುವುದು ವಿಶೇಷ. ಈ ಪಂದ್ಯದಲ್ಲಿ ಕೊಹ್ಲ್ಲಿ 204 ರನ್(246 ಎಸೆತ, 24 ಬೌಂಡರಿ) ಹೊಡೆದು ತಂಡದ ಮೊತ್ತ 495 ಆಗಿದ್ದಾಗ ಐದನೇಯವರಾಗಿ ಔಟಾದರು. ಕೊಹ್ಲಿ ದ್ವಿಶತಕ ಹೊಡೆದ ಎಲ್ಲ ಪಂದ್ಯಗಳನ್ನು ಭಾರತ ಗೆದ್ದಿರುವುದು ವಿಶೇಷ.

ಆ 3 ದ್ವಿಶತಕಗಳು
1. ವೆಸ್ಟ್ ಇಂಡಿಸ್ ವಿರುದ್ಧ ಅಂಟಿಗುವಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೊಹ್ಲಿ 200 ರನ್(283 ಎಸೆತ, 24 ಬೌಂಡರಿ) ಹೊಡೆದಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 92 ರನ್‍ಗಳಿಂದ ಗೆದ್ದುಕೊಂಡಿತ್ತು.

2. ಇಂದೋರ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಟೆಸ್ಟ್ ನಲ್ಲಿ  ಕೊಹ್ಲಿ 211 ರನ್( 366 ಎಸೆತ, 20 ಬೌಂಡರಿ) ಹೊಡೆದಿದ್ದರು. ಈ ಪಂದ್ಯವನ್ನು ಭಾರತ 321 ರನ್‍ಗಳಿಂದ ಗೆದ್ದುಕೊಂಡಿತ್ತು.

3. ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ನಾಲ್ಕನೇಯ ಟೆಸ್ಟ್ ನಲ್ಲಿ 235 ರನ್(340 ಎಸೆತ, 25 ಬೌಂಡರಿ, 1 ಸಿಕ್ಸರ್) ಹೊಡೆದಿದ್ದರು. ಈ ಪಂದ್ಯವನ್ನು ಭಾರತ ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು.

ಸೆಹ್ವಾಗ್ ದಾಖಲೆ ಮುರಿಯಿತು:
ಇಲ್ಲಿಯವರೆಗೆ ಸ್ವದೇಶದಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ವಿರೇಂದ್ರ ಸೆಹ್ವಾಗ್ ಹೆಸರಿನಲ್ಲಿತ್ತು. 2004/05ರ ಅವಧಿಯಲ್ಲಿ ಸೆಹ್ವಾಗ್ 9 ಪಂದ್ಯಗಳ 17 ಇನ್ನಿಂಗ್ಸ್ ಗಳಿಂದ 1105 ರನ್ ಬಾರಿಸಿದ್ದರು. ಈಗ ಕೊಹ್ಲಿ 9 ಪಂದ್ಯಗಳ 15 ಇನ್ನಿಂಗ್ಸ್ ಗಳಿಂದ 1168 ರನ್ ಹೊಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. ಸೆಹ್ವಾಹ್ ಈ ಅವಧಿಯಲ್ಲಿ 4 ಶತಕ, 3 ಅರ್ಧಶತಕ ಹೊಡೆದಿದ್ದರೆ, ಕೊಹ್ಲಿ 4 ಶತಕ, 2 ಅರ್ಧಶತಕ ಹೊಡೆದಿದ್ದಾರೆ.

ಕೊಹ್ಲಿ 200 ರನ್ ಹೊಡೆದಿದ್ದು ಹೀಗೆ:
50 ರನ್ – 70 ಎಸೆತ, 5 ಬೌಂಡರಿ
100 ರನ್ -130 ಎಸೆತ, 10 ಬೌಂಡರಿ
150 ರನ್ – 170 ಎಸೆತ, 19 ಬೌಂಡರಿ
200 ರನ್ – 239 ಎಸೆತ, 24 ಬೌಂಡರಿ
204 ರನ್ – 246 ಎಸೆತ, 24 ಬೌಂಡರಿ

Click to comment

Leave a Reply

Your email address will not be published. Required fields are marked *

Advertisement
Advertisement