ಲಂಡನ್: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನಾಯಕನಾಗಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮಂಗಳವಾರ ಲೀಡ್ಸ್‍ನಲ್ಲಿ ನಡೆದ ವಿರಾಟ್ ಕೊಹ್ಲಿಯ ಕಡಿಮೆ ಪಂದ್ಯಗಳಲ್ಲಿ 3,000 ರನ್ ಗಳ ಗಡಿತಲುಪಿದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 16 ರನ್ ಗಳಿಸಿದ್ದಾಗ ಕೊಹ್ಲಿ ಈ ಸಾಧನೆ ನಿರ್ಮಿಸಿದರು.
Advertisement
Advertisement
ವಿರಾಟ್ ಕೊಹ್ಲಿಯವರು ಒಟ್ಟಾರೆ 49 ಇನ್ನಿಂಗ್ಸ್ ನಲ್ಲಿ 3,000 ಗಡಿ ತಲುಪುವ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಈ ಮೊದಲು ಭಾರತದ ಮಾಜಿ ಕ್ಯಾಪ್ಟನ್ ಗಳಾದ ಮಹೇಂದ್ರ ಸಿಂಗ್ ಧೋನಿ 70 ಇನ್ನಿಂಗ್ಸ್ ಹಾಗೂ ಸೌರವ್ ಗಂಗೂಲಿ 74 ಇನ್ನಿಂಗ್ಸ್ ಆಡಿ ಈ ಸಾಧನೆಯನ್ನು ಮಾಡಿದ್ದರು. ಈ ಮೊದಲು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ರವರು 60 ಇನ್ನಿಂಗ್ಸ್ ಮೂಲಕ ಈ ಸಾಧನೆಯನ್ನು ಮಾಡಿದ್ದರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಪಾಕಿಸ್ತಾನ ಮಿಸ್ಬಾ ಉಲ್ ಹಕ್ 83 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದರೆ ಶ್ರೀಲಂಕಾದ ಸನತ್ ಜಯಸೂರ್ಯ ಮತ್ತು ಆಸ್ಟ್ರೇಲಿಯಾದ ರಿಕ್ಕಿ ಪಾಟಿಂಗ್ 84 ಇನ್ನಿಂಗ್ಸ್ ನಲ್ಲಿ ಈ ಸಾಧನೆ ನಿರ್ಮಿಸಿದ್ದರು.
Advertisement
ಮಂಗಳವಾರದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಪಂದ್ಯವನ್ನು ಜಯಿಸಿದೆ. ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 256ರನ್ ಗಳಿಸಿತ್ತು. ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 44.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 260 ರನ್ ಭಾರಿಸಿ ಪಂದ್ಯವನ್ನು ಗೆದ್ದುಕೊಂಡಿತು.