ಬೆಂಗಳೂರು: ಐಪಿಎಲ್ 11ನೇ ಆವೃತ್ತಿಯಲ್ಲಿ ಆರ್‌ಸಿಬಿ ಆಟಗಾರರ ಸೋಲಿನ ಸರಣಿ ಮುಂದುವರೆದಿದ್ದು, ಕೆಕೆಆರ್ ವಿರುದ್ಧ ಭಾನುವಾರ ನಡೆದ ಪಂದ್ಯವನ್ನು ಕೈಚೆಲ್ಲಿದ್ದ ಬಳಿಕ ತಂಡದ ಆಟಗಾರರ ವಿರುದ್ಧ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೊಹ್ಲಿ, ಇದೇ ರೀತಿ ಮುಂದಿನ ಪಂದ್ಯಗಳಲ್ಲಿ ತಂಡದ ಆಟಗಾರರು ಕಳಪೆ ಫೀಲ್ಡಿಂಗ್ ಪ್ರದರ್ಶನ ಮುಂದುವರೆಸಿದರೆ ಗೆಲುವು ಪಡೆಯಲು ಸಾಧ್ಯವಿಲ್ಲ. ನಾವು ಗೆಲುವಿಗಾಗಿ ಮತ್ತಷ್ಟು ಶ್ರಮವಹಿಸಬೇಕಿದೆ ಎಂದು ಹೇಳಿದ್ದಾರೆ.
Advertisement
Advertisement
ಈ ಸಂದರ್ಭದಲ್ಲಿ ಯಾವುದೇ ಆಟಗಾರನ್ನು ನಾನು ಗುರಿ ಮಾಡುವುದಿಲ್ಲ. ಈ ಆವೃತ್ತಿಯಲ್ಲಿ ಮುಂದಿನ ಹಂತಕ್ಕೆ ಆಯ್ಕೆ ಆಗಬೇಕಾದರೆ ಇನ್ನುಳಿದ 7 ಪಂದ್ಯದಲ್ಲಿ 6 ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಅದ್ದರಿಂದ ಪ್ರತಿಯೊಂದು ಪಂದ್ಯವು ತಂಡಕ್ಕೆ ಸೆಮಿಫೈನಲ್ ಪಂದ್ಯ ಎಂದು ಭಾವಿಸಬೇಕಿದೆ ಎಂದರು. ಇದನ್ನು ಓದಿ: ರನ್ನಿಂಗ್ ಡೈವ್ ಮಾಡಿ ಕ್ಯಾಚ್ ಪಡೆದ ಕೊಹ್ಲಿ – ಅನುಷ್ಕಾ ಕೊಟ್ಟ ರಿಯಾಕ್ಷನ್ ಹೀಗಿದೆ!
Advertisement
ಕೆಕೆಆರ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕ್ರಿಸ್ ಲಿನ್ 52 ಎಸೆಗಳಲ್ಲಿ 62 ರನ್ ಸಿಡಿಸಿದ್ದರು. ಆದರೆ ಪಂದ್ಯದ ಆರಂಭದ ನಾಲ್ಕನೇ ಓವರ್ ವೇಳೆ 7 ರನ್ ಗಳಿಸಿದ್ದ ಲಿನ್ ಬಿರುಸಿನ ಹೊಡೆತಕ್ಕೆ ಕೈ ಹಾಕಿ ಕವರ್ ಫೀಲ್ಡ್ ನಲ್ಲಿದ್ದ ಆರ್‌ಸಿಬಿ ಯುವ ಆಟಗಾರ ಮುರುಗನ್ ಅಶ್ವಿನ್ ಗೆ ಕ್ಯಾಚ್ ನೀಡಿದ್ದರು. ಸುಲಭವಾಗಿದ್ದ ಈ ಕ್ಯಾಚನ್ನು ಅಶ್ವಿನ್ ಪಡೆಯದೇ ಕೈಚೆಲ್ಲಿದ್ದರು. ಈ ಕ್ಯಾಚ್ ಪಂದ್ಯದ ದಿಕ್ಕನ್ನೇ ಬದಲಾಯಿಸಿತು. ಈ ಹಿಂದೆ ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲೂ ಆರ್‌ಸಿಬಿ ಬೌಲರ್ ಉಮೇಶ್ ಯಾದವ್ ರಾಯುಡು ಕ್ಯಾಚ್ ಪಡೆಯಲು ವಿಫಲರಾಗಿ ತಂಡ ಸೋಲುಂಡುವಂತೆ ಮಾಡಿದ್ದರು. ಈ ಪಂದ್ಯದಲ್ಲಿ ರಾಯುಡು 53 ಎಸೆತಗಳಲ್ಲಿ 82 ರನ್ ಗಳಿಸಿ ಮಿಂಚಿದ್ದರು. ಇದನ್ನು ಓದಿ: 8.90 ಸೆಕೆಂಡ್‍ಗೆ 3 ರನ್ ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!
Advertisement
Umesh Yadav Dropped Ambati Rayudu. Turning Point? #RCBvCSK #WhistlePodu #Dhoni pic.twitter.com/e0iEGPQQ5u
— Sir Jadeja fan (@SirJadeja) April 25, 2018
https://twitter.com/gnitin4450/status/989201701235179521?