ದುಬೈ: ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ 10 ಸಾವಿರ ರನ್‍ಗಳ ಸರದಾರನಾಗಿ ನೂತನ ಮೈಲಿಗಲ್ಲು ಸೃಷ್ಟಿಸಿದ್ದಾರೆ.
Advertisement
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್‍ನ ಮುಂಬೈ ವಿರುದ್ಧದ ಪಂದ್ಯದಲ್ಲಿ ವಿರಾಟ್ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್ ಐಪಿಎಲ್ ಸಹಿತ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ 10 ಸಾವಿರ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಟಿ20 ಮಾದರಿ ಕ್ರಿಕೆಟ್‍ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಸಿಡಿಸಿದ 5ನೇ ಅಟಗಾರನಾಗಿ ಕೊಹ್ಲಿ ಹೊರ ಹೊಮ್ಮಿದ್ದಾರೆ. ಇದನ್ನೂ ಓದಿ: ಮ್ಯಾಕ್ಸಿ ಆಲ್‍ರೌಂಡರ್ ಆಟ, ಹರ್ಷಲ್ ಹ್ಯಾಟ್ರಿಕ್ – ಬೆಂಗಳೂರಿಗೆ 54 ರನ್‍ಗಳ ಭರ್ಜರಿ ಜಯ
Advertisement
Advertisement
ವಿರಾಟ್ 10 ಸಾವಿರ ರನ್ ವೇಗವಾಗಿ ದಾಖಲಿಸಿದ ವಿಶ್ವದ ಎರಡನೇ ಆಟಗಾರ. ಈ ಮೊದಲು ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ 285 ಇನ್ನಿಂಗ್ಸ್‌ಗಳಿಂದ 10 ಸಾವಿರ ರನ್ ಬಾರಿಸಿ ಮಿಂಚಿದ್ದರು, ಇದೀಗ ಕೊಹ್ಲಿ ತಮ್ಮ 299ನೇ ಇನ್ನಿಂಗ್ಸ್‌ನಲ್ಲಿ 10 ಸಾವಿರ ರನ್ ಪೂರೈಸಿ ರನ್ ಶಿಖರವನ್ನೇರಿದ್ದಾರೆ. ಇದನ್ನೂ ಓದಿ: ಆರ್ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್
Advertisement
ಟಿ20 ಕ್ರಿಕೆಟ್‍ನಲ್ಲಿ ಕ್ರಿಸ್ ಗೇಲ್ 14,261 ರನ್‍ಗಳೊಂದಿಗೆ ಮೊದಲ ಸ್ಥಾನ ಪಡೆದರೆ, ಮುಂಬೈ ಪರ ಬ್ಯಾಟ್ ಬೀಸುವ ಕೀರನ್ ಪೊಲಾರ್ಡ್ 11,159ರನ್ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ 10,808 ರನ್ ಬಾರಿಸಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರೆ, ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಹೈದರಾಬಾದ್ ಪರ ಆಡುವ ಡೇವಿಡ್ ವಾರ್ನರ್ ಇದ್ದಾರೆ. ಇದನ್ನೂ ಓದಿ: ಸಂಜು ಸ್ಯಾಮ್ಸನ್‍ಗೆ 24 ಲಕ್ಷ ದಂಡ – ಆಟಗಾರರಿಗೂ ಭಾರೀ ಫೈನ್