ಅಹಮದಾಬಾದ್: ವಿಶ್ವಕಪ್ ಟೂರ್ನಿ (World Cup 2023) ಒಂದರಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ.
ಆಫ್ರಿಕಾದ ಆತಿಥ್ಯದಲ್ಲಿ ನಡೆದಿದ್ದ 2003 ರ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಭಾರತ ತಂಡದ ಪರವಾಗಿ 673 ರನ್ ಬಾರಿಸಿದ್ದರು. 20 ವರ್ಷಗಳ ನಂತರ ಈ ದಾಖಲೆಯನ್ನು ವಿರಾಟ್ ಕೊಹ್ಲಿ (Virat Kohli) ಮುರಿದಿದ್ದಾರೆ. ಇದನ್ನೂ ಓದಿ: ದಾಖಲೆಗಾಗಿ ಆಡದೇ ಇದ್ದರೂ ವಿಶ್ವದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ
Advertisement
Advertisement
2023 ರ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ, ಸಚಿನ್ ದಾಖಲೆ ಮುರಿದರು. 101.57ರ ಸರಾಸರಿಯಲ್ಲಿ ಒಟ್ಟಾರೆ 711 ರನ್ ಬಾರಿ ಕೊಹ್ಲಿ ದಾಖಲೆ ಸೃಷ್ಟಿಸಿದ್ದರು.
Advertisement
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮ್ಮ ದಾಖಲೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 750 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲದೇ ಈ ಆವೃತ್ತಿಯಲ್ಲಿ ಕೊಹ್ಲಿ 3 ಶತಕ, 9 ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಇದನ್ನೂ ಓದಿ: World Cup 2023- ನೀವು ನಮ್ಮ ಹೆಮ್ಮೆ- ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಚಿನ್ ಜೆರ್ಸಿ ಗಿಫ್ಟ್
Advertisement
ವಿರಾಟ್ ಕೊಹ್ಲಿ 48 ವರ್ಷಗಳ ವಿಶ್ವಕಪ್ ಇತಿಹಾಸದಲ್ಲಿ ಸೆಮಿ ಮತ್ತು ಫೈನಲ್ ಎರಡರಲ್ಲೂ 50+ ರನ್ ಗಳಿಸಿದ ಮೊದಲ ಭಾರತೀಯರಾಗಿದ್ದಾರೆ. 2023ರ ವಿಶ್ವಕಪ್ ಟೂರ್ನಿ ಒಂದೇ ಆವೃತ್ತಿಯಲ್ಲಿ 9 ಅರ್ಧಶತಕ, ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ 72 ಅರ್ಧಶತಕ ಬಾರಿಸಿದ್ದಾರೆ. ಇದನ್ನೂ ಓದಿ: ಮೂರು ಫೈನಲ್ ಪೈಕಿ ಟಾಸ್ ಸೋತ ಎರಡರಲ್ಲಿ ಭಾರತ ಚಾಂಪಿಯನ್ – ಈ ಬಾರಿ ಏನಾಗಬಹುದು?
ವಿಶ್ವಕಪ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟರ್ಸ್
* ವಿರಾಟ್ ಕೊಹ್ಲಿ (ಭಾರತ): 2023 ರಲ್ಲಿ 750+ ರನ್
* ಸಚಿನ್ ತೆಂಡೂಲ್ಕರ್ (ಭಾರತ): 2003 ರಲ್ಲಿ 673 ರನ್
* ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ): 2007 ರಲ್ಲಿ 659 ರನ್
* ರೋಹಿತ್ ಶರ್ಮಾ (ಭಾರತ): 2019 ರಲ್ಲಿ 648 ರನ್