ಮುಂಬೈ: ಬಾಂಗ್ಲಾದೇಶ ವಿರುದ್ಧ ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) 27,000 ಅಂತಾರಾಷ್ಟ್ರೀಯ ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್ ದಾಖಲೆ ಬರೆದಿದ್ದಾರೆ. ಆ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದ್ದಾರೆ.
ಎಲ್ಲಾ ಸ್ವರೂಪಗಳಲ್ಲಿ 27,000 ರನ್ ಪೂರೈಸಿದ ಕಿಂಗ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಕುಮಾರ್ ಸಂಗಕ್ಕಾರ ಒಳಗೊಂಡಿರುವ ಬ್ಯಾಟರ್‌ಗಳ ವಿಶೇಷ ಕ್ಲಬ್‌ಗೆ ಸೇರಿದ್ದಾರೆ. ಇದನ್ನೂ ಓದಿ: IPL Mega Auction | ಹಿಟ್‌ಮ್ಯಾನ್ ರೋಹಿತ್ ಇನ್ – ಡುಪ್ಲೆಸಿ ಔಟ್ – ಆರ್‌ಸಿಬಿಗೆ ಆನೆ ಬಲ
2007ರಲ್ಲಿ 623 ಇನ್ನಿಂಗ್ಸ್‌ಗಳಲ್ಲಿ ತೆಂಡೂಲ್ಕರ್ 27000 ರನ್ ಗಳಿಸಿದ್ದರು. ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. 594ನೇ ಇನ್ನಿಂಗ್ಸ್‌ನಲ್ಲೇ ಈ ಸಾಧನೆ ಮಾಡಿರುವ ವಿರಾಟ್, ಸಚಿನ್‌ಗಿಂತ 29 ಇನ್ನಿಂಗ್ಸ್‌ಗಳಿಗೂ ಮುಂಚಿತವಾಗಿ 27,000 ರನ್‌ಗಳ ಗುರಿ ತಲುಪಿದ್ದಾರೆ. ಶ್ರೀಲಂಕಾದ ಸಂಗಕ್ಕಾರ ಅವರು 2015 ರಲ್ಲಿ ತಮ್ಮ 648ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ತನ್ನ 650ನೇ ಇನ್ನಿಂಗ್ಸ್‌ನಲ್ಲಿ ಇಷ್ಟು ರನ್ ಗಳಿಸಿದ್ದಾರೆ.
ಫೆಬ್ರವರಿ 2023 ರಲ್ಲಿ ಕೊಹ್ಲಿ 549 ಇನ್ನಿಂಗ್ಸ್‌ಗಳಲ್ಲಿ 25,000 ರನ್ ಗಳಿಸಿದ ವೇಗದ ಬ್ಯಾಟರ್ ಆಗಿದ್ದರು. ಆಗಲೂ ಸಚಿನ್ ದಾಖಲೆ ಉಡೀಸ್ ಮಾಡಿದ್ದರು. ಇದನ್ನೂ ಓದಿ: IPL Mega Auction | ರಿಟೇನ್ ಆಟಗಾರರ ಪಟ್ಟಿ ಪ್ರಕಟಿಸಲು ಫ್ರಾಂಚೈಸಿಗಳಿಗೆ ಡೆಡ್‌ಲೈನ್ ಫಿಕ್ಸ್!
27,000 ರನ್ ಪೂರೈಸಿದ ವೇಗದ ಬ್ಯಾಟರ್‌ಗಳು
594 ಇನ್ನಿಂಗ್ಸ್ – ವಿರಾಟ್ ಕೊಹ್ಲಿ
623 ಇನ್ನಿಂಗ್ಸ್ – ಸಚಿನ್ ತೆಂಡೂಲ್ಕರ್
648 ಇನ್ನಿಂಗ್ಸ್ – ಕುಮಾರ ಸಂಗಕ್ಕಾರ
650 ಇನ್ನಿಂಗ್ಸ್ – ರಿಕಿ ಪಾಂಟಿಂಗ್