ಸಿಡ್ನಿ: ನನ್ನ ದಾಖಲೆಗಳನ್ನು ಮುರಿಯುವ ಶಕ್ತಿ, ಸಾಮರ್ಥ್ಯವನ್ನು ವಿರಾಟ್ ಕೊಹ್ಲಿ ಹೊಂದಿದ್ದಾರೆ ಎಂಬ ಸಚಿನ್ ಮಾತಿನಂತೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆ ಮುರಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸಚಿನ್‍ರ ಮತ್ತೊಂದು ದಾಖಲೆಯನ್ನು ಮುರಿದಿರುವ ಕೊಹ್ಲಿ, ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ವೇಗವಾಗಿ 17 ಸಾವಿರ ರನ್ ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
Advertisement
ಕೊಹ್ಲಿ ಈ ಪಂದ್ಯದಲ್ಲಿ 23 ರನ್ ಗಳಿಸಿ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದರು ಕೂಡ 11 ರನ್ ಗಳಿಸಿದ್ದ ವೇಳೆ ಟಿ20, ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಗಳಲ್ಲಿ 19 ಸಾವಿರ ರನ್ ಪೂರ್ಣಗೊಳಿಸಿದ್ದರು. ಕೊಹ್ಲಿ ಈ ಸಾಧನೆಯನ್ನು 399 ಇನ್ನಿಂಗ್ಸ್ ಗಳಲ್ಲಿ ಮಾಡಿದ್ದು, ಸಚಿನ್ 432 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ರನ್ ಹೊಡೆದಿದ್ದರು.
Advertisement
Virat Kohli at his very best for the Shot of the Day!#AUSvIND | @MastercardAU pic.twitter.com/lBeGXOjo8v
— cricket.com.au (@cricketcomau) January 3, 2019
Advertisement
ಉಳಿದಂತೆ ವೆಸ್ಟ್ ಇಂಡೀಸ್ ತಂಡದ ಲಾರಾ 433 ಇನ್ನಿಂಗ್ಸ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 444 ಇನ್ನಿಂಗ್ಸ್, ಸೌತ್ ಆಫ್ರಿಕಾದ ಜಾಕ್ ಕಾಲಿಸ್ 458 ಇನ್ನಿಂಗ್ಸ್ ಗಳಲ್ಲಿ 19 ಸಾವಿರ ಪೂರ್ಣಗೊಳಿಸಿ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ 2018 ರಲ್ಲಿ 2,735 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದರು. ಅಲ್ಲದೇ 2019 ಆರಂಭದಲ್ಲೇ ಮಹತ್ವದ ದಾಖಲೆ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ.
Advertisement
ಎಷ್ಟು ಇನ್ನಿಂಗ್ಸ್ ಗಳಲ್ಲಿ ಎಷ್ಟು ರನ್?
15 ಸಾವಿರ ರನ್ (333 ಇನ್ನಿಂಗ್ಸ್)
16 ಸಾವಿರ ರನ್ (350 ಇನ್ನಿಂಗ್ಸ್)
17 ಸಾವಿರ ರನ್ (363 ಇನ್ನಿಂಗ್ಸ್)
18 ಸಾವಿರ ರನ್ (382 ಇನ್ನಿಂಗ್ಸ್)
19 ಸಾವಿರ ರನ್ (399 ಇನ್ನಿಂಗ್ಸ್)
Indians scoring 3 or more 100s in a Test series outside Asia:
4 Gavaskar in WI, 1970-71
3 Sardesai in WI, 1970-71
3 Gavaskar in Aus, 1977-78
3 Dravid in Eng, 2002
3 Dravid in Eng, 2011
4 Kohli in Aus, 2014-15
3 PUJARA in Aus, 2018-19#AusvInd
— Bharath Seervi (@SeerviBharath) January 3, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv