ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮಿಬ್ಬರದ್ದು ಶುದ್ಧ ಪ್ರೀತಿ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ವಿರಾಟ್ ಹಾಗೂ ಅನುಷ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಜಾಹೀರಾತು ಚಿತ್ರೀಕರಣ ಮಾಡುವಾಗ ಖುಷಿ ಆಯಿತು” ಎಂದು ಬರೆದು “ಶುದ್ಧ ಹಾಸ್ಯ” ಎಂದು ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
Advertisement
ಈ ಜಾಹೀರಾತಿನಲ್ಲಿ ವಿರಾಟ್ ಕೆಲಸದಲ್ಲಿ ಬ್ಯುಸಿಯಿದ್ದ ತನ್ನ ಪತ್ನಿ ಅನುಷ್ಕಾರಿಗೆ ಒಂದು ಕಪ್ ಕಾಫಿ ನೀಡುತ್ತಾರೆ. ಅನುಷ್ಕಾ ಕಾಫಿ ಕುಡಿಯಲು ಮುಂದಾದಾಗ ವಿರಾಟ್ ಆಕೆಯನ್ನು ತಡೆದು ಬಿಸಿ ಇದೆ ಎಂದು ಹೇಳುತ್ತಾರೆ. ಬಳಿಕ ವಿರಾಟ್, ನಮ್ಮ ಪ್ರೀತಿಯಲ್ಲಿ ಏನೂ ವಿಶೇಷವಿದೆ ಎಂದು ಎಲ್ಲರೂ ಕೇಳುತ್ತಾರೆ ಎಂದರು. ಆಗ ಅನುಷ್ಕಾ ಏನೂ ವಿಶೇಷ ಇಲ್ಲ ಎಂದು ಹೇಳುತ್ತಾರೆ. ಬಳಿಕ ಕೇವಲ ಶುದ್ಧ ಪ್ರೀತಿ ಎಂದು ಅನುಷ್ಕಾ ಪ್ರತಿಕ್ರಿಯಿಸುತ್ತಾರೆ.
Advertisement
Advertisement
ಈ ಹಿಂದೆ ಅಂದರೆ ವಿರಾಟ್ ಹಾಗೂ ಅನುಷ್ಕಾ ಮದುವೆ ಆಗುವ ಮೊದಲು ಜಾಹೀರಾತು ಮೂಲಕ ತಮ್ಮ ಪ್ರೀತಿಯನ್ನು ಅನಾವರಣಗೊಳಿಸಿದ್ದರು. ಬಳಿಕ ಮೊದಲ ವಿವಾಹ ವಾರ್ಷಿಕೋತ್ಸವ ಸಮಯದಲ್ಲಿ ಅದೇ ಶೈಲಿಯಲ್ಲಿಯೇ ಮದುವೆಯ ಒಂದು ವರ್ಷದ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರುವ ವಿರುಷ್ಕಾ ಮದುವೆ ಸೆಟ್ ನಲ್ಲಿ ನವಜೋಡಿಗೆ ಸಾಂಸರಿಕ ಸಲಹೆಗಳನ್ನು ನೀಡಿದ್ದರು. ಇಬ್ಬರ ಪ್ರೀತಿಯೂ ಮೊದಲು ಜಾಹೀರಾತಿನಿಂದ ಆರಂಭಗೊಂಡಿದು ವಿಶೇಷ.
Advertisement
ವಿರಾಟ್ ಕೊಹ್ಲಿ ಹಾಗು ಅನುಷ್ಕಾ ಶರ್ಮಾ ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.