– ವಿರುಷ್ಕಾ ಜೋಡಿಯ ಮದ್ವೆ ಫೋಟೋಗ್ರಾಫರ್ ಕಥೆ
– ಹವ್ಯಾಸವನ್ನೇ ವೃತ್ತಿಯನ್ನಾಗಿಸಿದ ‘ಕ್ಲಿಕ್ಕ’ರ್
– ವೃತ್ತಿಯಿಂದಾಗಿ ವಿಶ್ವವನ್ನೇ ಸುತ್ತುವ ಭಾಗ್ಯ
ಮುಂಬೈ: ವೃತ್ತಿ ಜೊತೆ ಬೆಳೆಸಿಕೊಂಡ ಹವ್ಯಾಸವೇ ಕೆಲವೊಮ್ಮೆ ವೃತ್ತಿಯಾಗಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ವಿರುಷ್ಕಾ ಮದುವೆಯ ಪೋಟೋಗ್ರಾಫರ್. ಅವರು ಓದಿದ್ದು ಎಂಜಿನಿಯರ್ ಪದವಿ. ಆದರೆ ಆಗಿದ್ದು ಮದುವೆ ಫೋಟೋಗ್ರಾಫರ್.
2017 ಡಿ.11 ರಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಖ್ಯಾತ ಜೋಡಿಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ಫೋಟೋಗಳನ್ನು ಸೆರೆಹಿಡಿದ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ತಮ್ಮ ಕೆಲಸದ ಕುರಿತು ಮಾತನಾಡಿದ್ದಾರೆ.
Advertisement
https://www.instagram.com/p/BckS2WtA3jF/?utm_source=ig_embed&utm_campaign=dlfix
Advertisement
ಜೋಸೆಫ್ ರಾಧಿಕ್ ಅವರು ವಿರುಷ್ಕಾ ಜೋಡಿಯ ಮದುವೆಯ ಸವಿ ನೆನಪುಗಳನ್ನು ಸೆರೆ ಹಿಡಿದಿದ್ದು, ತಮ್ಮ ಫೋಟೋಗಳು ವಿಶೇಷವಾಗಿರಲು ಹಾಗೂ ಅಷ್ಟು ಮೆಚ್ಚುಗೆ ಪಡೆಯಲು ಕಾರಣವೇನು ಎಂಬುವುದನ್ನು ರಿವೀಲ್ ಮಾಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದಿರುವ ರಾಧಿಕ್ ನೆಚ್ಚಿನ ಫೋಟೋಗ್ರಾಫಿಯನ್ನು ವೃತ್ತಿಯಾಗಿಸಿಕೊಂಡಿದ್ದ ಕುರಿತು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
ಪೋಸ್ಟ್ ನಲ್ಲಿ ಏನಿದೆ?
ಕಾಲೇಜು ಸಮಯದಲ್ಲಿ ನಾನು ನನ್ನ 1 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಕೇವಲ 3 ವಿಷಯಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಸೂರ್ಯಾಸ್ತ, ಜೀವಿಗಳು ಹಾಗೂ ಹೂಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಆದರೆ ಎಂದು ಇದನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ತಿಳಿದಿರಲಿಲ್ಲ. ಆದರೆ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿದ್ದು, ಸಹೋದರಿಯ ಮದುವೆ ಕಾರ್ಯಕ್ರಮ. ಈ ವೇಳೆ ಭಾರತದಲ್ಲಿ ಮದುವೆ ಫೋಟೋಗ್ರಾಫಿ ತುಂಬಾ ದೂರ ಸಾಗಬೇಕಿದೆ ಎನ್ನಿಸಿತ್ತು. ನನ್ನ ಸಹೋದರಿ ಮದುವೆ ಫೋಟೋ ಮಾತ್ರವಲ್ಲದೇ ಗೆಳೆಯರ ಮದುವೆಯ ಫೋಟೋಗಳನ್ನು ನಾನು ತೆಗೆದಿದ್ದೆ. ಆ ಫೋಟೋಗಳಿಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.
Advertisement
ನಾನು ಪ್ರತಿ ಜೋಡಿಯ ಫೋಟೋಗಳನ್ನು ತೆಗೆಯುವ ಸಂದರ್ಭದಲ್ಲಿ ಅದನ್ನು ಅವರ ಸ್ನೇಹಿತನೇ ತೆಗೆದಿದ್ದು ಎಂಬ ಭಾವನೆ ಅವರಿಗೆ ಮೂಡಲು ಬಯಸುತ್ತೇನೆ. ಫೋಟೋಗಳಲ್ಲಿ ನೈಜತೆ ಹಾಗೂ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇದುವೇ ನನ್ನ ಫೋಟೋಗಳು ಹೆಚ್ಚು ಇಷ್ಟವಾಗಲು ಸಹಾಯಕವಾಗಿದೆ. ವಿರುಷ್ಕಾರ ಮದುವೆಯಲ್ಲೂ ಪ್ರೀತಿಯ ನೈಜ ಅಂಶ ಕಾಣಸಿಗುತ್ತದೆ.
https://www.instagram.com/p/BckS2N4gsql/?utm_source=ig_embed&utm_campaign=dlfix
ನಾನು ಉತ್ತಮ ಶಿಕ್ಷಣವನ್ನು ಪಡೆದಿದ್ದ ಕುಟುಂಬದಿಂದ ಬಂದಿದ್ದು, ನನ್ನ ತಂದೆ-ತಾಯಿ ಇಬ್ಬರು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಲು ಬಯಸಿದ್ದರು. ಆದರೆ ಎಂದೂ ಮಕ್ಕಳ ಕ್ರಿಯೆಟಿವಿಟಿಯನ್ನು ತಡೆಯುವ ಯತ್ನ ಮಾಡಲಿಲ್ಲ. ನನ್ನ ಬಾಲ್ಯದಲ್ಲಿ ಚಿತ್ರಕಲೆಯಿಂದ ಪೈಲಟ್ ಆಗುವವರೆಗಿನ ಎಲ್ಲಾ ಯೋಚನೆಗಳನ್ನು ನಾನು ಮಾಡಿದ್ದೆ. ಆದರೆ ಯಾವುದೂ ನನಗೆ ಸರಿ ಎನಿಸಲಿಲ್ಲ. ಆ ವೇಳೆ ಫೋಟೋ ಜರ್ನಲಿಸ್ಟ್ ಆಗಿದ್ದ ಚಿಕ್ಕಪ್ಪ ಅವರು ಕಳುಹಿಸುತ್ತಿದ್ದ ಫೋಟೋಗಳು, ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದದ್ದು ನನ್ನನ್ನು ಆಕರ್ಷಿಸಿತ್ತು. ಇದುವೇ ನನಗೆ ಫೋಟೋಗ್ರಾಫರ್ ಆಗಲು ಪ್ರೇರಣೆ ಎನ್ನಬಹುದು. ಆ ಬಳಿಕ ಶಿಕ್ಷಣದಲ್ಲಿ ನಾನು ಇಷ್ಟಪಟ್ಟು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದೆ.
ಫೋಟೋಗ್ರಾಫಿ ನನ್ನ ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಬೆಳೆದು ಬಂದಿತ್ತು. ಆದರೆ ನನ್ನ ಬಾಸ್ ಒಮ್ಮೆ ಮುಂದಿನ 5 ವರ್ಷದ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದರು. ಏಕೆಂದರೆ ಅದು ನನ್ನ ಮುಂದಿನ 40 ವರ್ಷ ನಾನು ಮಾಡಬೇಕಾಗಿದ್ದ ಕಾರ್ಯವಾಗಿತ್ತು. ಆದರೆ ನನ್ನ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿದ್ದು, ನನ್ನ ಸಹೋದರಿಯ ಮದುವೆ. ಈ ವೇಳೆ ಫೋಟೋಗ್ರಾಫಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ನಾನು ಸರ್ಚ್ ಮಾಡಿದ್ದೆ. ಇದು ನನಗೆ ಹೊಸ ಪ್ರಪಂಚವನ್ನು ತೆರೆದಿಟ್ಟಿತ್ತು. ಅಲ್ಲದೇ ಭಾರತದಲ್ಲಿ ವೆಡ್ಡಿಂಗ್ ಫೋಟೋಗ್ರಾಫಿ ಬಗ್ಗೆಯೂ ತಿಳಿಸಿತ್ತು. ಮದುವೆಗೆ ಫೋಟೋಗ್ರಾಫರ್ ಬುಕ್ ಮಾಡಿದ್ದರು. ನನ್ನದೇ ಆದ ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದೆ. ಈ ಫೋಟೋಗಳಿಗೆ ಹೆಚ್ಚು ಮೆಚ್ಚುಗೆ ಬಂದಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಹಲವರು ನನ್ನನ್ನು ಸಂಪರ್ಕಿಸಿದ್ದರು.
https://www.facebook.com/humansofbombay/photos/a.253147214894263/1214501375425504/?type=3&theater
ಆ ಬಳಿಕ ಕೆಲಸವನ್ನು ಬಿಟ್ಟು ಹಲವು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದೆ. ಕೆಲವೇ ಸಮಯದಲ್ಲಿ ಫೋಟೋಗ್ರಾಫಿ ನನ್ನ ವೃತ್ತಿಯಾಯಿತು. ಈ ವೇಳೆಯೇ ನನಗೆ ವಿರುಷ್ಕಾ ಅವರ ಮದುವೆ ಕಾರ್ಯಕ್ರಮ ಫೋಟೋ ತೆಗೆಯುವ ಅವಕಾಶ ಲಭಿಸಿತ್ತು. ವಿರುಷ್ಕಾರ ಮದುವೆ ಫೋಟೋಗಳಲ್ಲಿ ಅವರ ಪ್ರೀತಿಯ ನೈಜ ಅಂಶ ಕಂಡು ಬಂದಿದ್ದೇ ಎಲ್ಲರಿಗೂ ಇಷ್ಟವಾಗಲು ಕಾರಣವಾಯಿತು. ಇಂದು ನಾನು ವಿಶ್ವದ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿ ಅನುಭವಗಳನ್ನು ಪಡೆಯುವ ಮೂಲಕ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಈ ಸಮಯದಲ್ಲಿ ನನಗೆ ಅನ್ನಿಸಿದ್ದು ಇಷ್ಟೇ. ಜೀವನ ನಮಗೆ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ. ಆದರೆ ಒಮ್ಮೆ ಆ ಅವಕಾಶ ಲಭಿಸಿದಾಗ ಅದನ್ನು ಪ್ರೀತಿಯಿಂದ ಬಾಚಿಕೊಳ್ಳಬೇಕು. ಈ ಪ್ರಯಾಣವನ್ನು ಯಾಕೆ ಪ್ರಾರಂಭಿಸಿದ್ದೀರಿ ಎಂಬುವುದನ್ನು ನೀವು ಎಂದಿಗೂ ಮರೆಯದಿದ್ದರೆ ಎಲ್ಲವನ್ನೂ ಮಾಡಬಹುದು.