ನವದೆಹಲಿ: ಹಲವರು ಸಾಕು ಪ್ರಾಣಿಗಳನ್ನು ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುವ ಮೂಲಕ ಕಾಳಜಿ ವಹಿಸಿ ಸಾಕುತ್ತಾರೆ. ಸಮಯ ಸಿಕ್ಕರೆ ಸಾಕು ಯಾವಾಗಲೂ ತಮ್ಮ ಮುದ್ದಿನ ಸಹವರ್ತಿ ಬಗ್ಗೆ ಹೇಳುತ್ತಲೇ ಇರುತ್ತಾರೆ. ಊಟ ಮಾಡಿಸುವುದು, ಅದರೊಂದಿಗೆ ವಾಕಿಂಗ್ ಹೋಗುವುದು ಹೀಗೆ ಎಲ್ಲ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅದೇ ರೀತಿ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಮುದ್ದಿನಿಂದ ಸಾಕಿದ್ದ ಬ್ರುನೊ ಇದೀಗ ಸಾವನ್ನಪ್ಪಿದೆ. ಇದಕ್ಕಾಗಿ ಇಬ್ಬರೂ ಕಂಬನಿ ಮಿಡಿದಿದ್ದಾರೆ.
Advertisement
ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಇಬ್ಬರೂ ಪೋಸ್ಟ್ ಮಾಡಿದ್ದು, ಭಾವನಾತ್ಮಕ ಸಾಲುಗಳೊಂದಿಗೆ ತಾವು ಸಾಕಿದ ಮುದ್ದಿನ ನಾಯಿ ಬ್ರುನೊಗೆ ವಿದಾಯ ಹೇಳಿದ್ದಾರೆ. ಕೊಹ್ಲಿ ಬ್ರುನೊ ಫೋಟೋ ಪೋಸ್ಟ್ ಮಾಡಿ, ರೆಸ್ಟ್ ಇನ್ ಪೀಸ್ ಮೈ ಬ್ರುನೊ. 11 ವರ್ಷಗಳ ಕಾಲ ನಮ್ಮ ಜೀವನವನ್ನು ಪ್ರೀತಿಯಿಂದ ಅಲಂಕರಿಸಿದೆ. ಈ ಮೂಲಕ ಜೀವಮಾನವಿಡೀ ಸಂಪರ್ಕದಲ್ಲಿರುವಂತೆ ಮಾಡಿದೆ. ಇಂದು ಉತ್ತಮ ಸ್ಥಳಕ್ಕೆ ಹೋಗಿದ್ದೀಯಾ, ದೇವರು ನಿನ್ನ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಅನುಷ್ಕಾ ಶರ್ಮಾ ಸಹ ಈ ಕುರಿತು ಪೋಸ್ಟ್ ಮಾಡಿದ್ದು, ಬ್ರುನೊ ಜೊತೆಗೆ ತಾವಿಬ್ಬರೂ ಕ್ಲಿಕ್ಕಿಸಿದ ಫೋಟೋ ಹಾಕಿ ಹಾರ್ಟ್ ಎಮೋಜಿ ಹಾಗೂ ಬ್ರುನೊ ಆರ್‍ಐಪಿ ಎಂದು ಬರೆದುಕೊಂಡಿದ್ದಾರೆ. ಬ್ರುನೊ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ ನಂತರ ವಿರಾಟ್ ಕೊಹ್ಲಿ ಇತ್ತೀಚೆಗೆ 15 ಬೀದಿ ನಾಯಿಗಳನ್ನು ದತ್ತು ಪಡೆದಿದ್ದಾರೆ. ಬೆಂಗಳೂರಿನ ಚಾರ್ಲಿಸ್ ಅನಿಮಲ್ ರೆಸ್ಕ್ಯೂ ಸೆಂಟರ್ ನ ಶೆಲ್ಟರ್ ನಲ್ಲಿನ ನಾಯಿಗಳನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ.
Advertisement
ಲಾಕ್‍ಡೌನ್ ಹಿನ್ನೆಲೆ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ತಾನು ಹಾಗೂ ಚೇತೇಶ್ವರ ಪೂಜಾರ್ ಫೀಲ್ಡ್‍ನಲ್ಲಿ ಕ್ಯಾಚ್ ಹಿಡಿಯುವ ಫೋಟೋ ಹಾಕಿ, ಲಾಕ್‍ಡೌನ್ ನಂತರ ನಮ್ಮ ಮೊದಲ ಸೆಶನ್ ಹೀಗೆ ಇರುತ್ತದೆ. ಬಾಲ್‍ಗಾಗಿ ನೀನು ಹೋಗುತ್ತೀಯಾ ಎಂದು ನಾನು ನಂಬಿದ್ದೇನೆ ಪುಜ್ಜಿ ಎಂದು ಕೊಹ್ಲಿ ಬರೆದಿದ್ದಾರೆ. ಇದಕ್ಕೆ ಚೇತೇಶ್ವರ್ ಪೂಜಾರ್ ಪ್ರತಿಕ್ರಿಯಿಸಿದ್ದು, ಯೆಸ್ ಕ್ಯಾಪ್ಟನ್, ಎರಡೂ ಕೈಗಳಿಂದ ಬಾಲ್ ಕ್ಯಾಚ್ ಹಿಡಿಯುತ್ತೇನೆ ಎಂದಿದ್ದಾರೆ.