Tuesday, 17th July 2018

ವಿರಾಟ್ ಕೊಹ್ಲಿ ಮದುವೆಗೆ ಬೇಸರ ವ್ಯಕ್ತಪಡಿಸಿದ್ರು ಈ ನಟಿ

ಮುಂಬೈ: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆಯ ವಿಷಯ ತಿಳಿಯುತ್ತಿದ್ದಂತೆ ಕ್ರಿಕೆಟ್ ಮತ್ತು ಬಾಲಿವುಡ್ ಮಂದಿ ಶುಭಾಶಯ ತಿಳಿಸಿದ್ದರು. ಆದರೆ ಬಾಲಿವುಡ್ ನ ರಾಖಿ ಸಾವಂತ್ ಮಾತ್ರ ಬಲು ಬೇಸರ ವ್ಯಕ್ತಪಡಿಸಿದ್ದಾರೆ.

ಇಟಲಿಯ ಟಸ್ಕನಿ ನಗರದ ‘ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ ಮದುವೆಯ ಸುದ್ದಿ ಕೇಳುತ್ತಿದ್ದಂತೆ ನಟಿ ರಾಖಿ ಸಾವಂತ್ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್ ತಮ್ಮ ಬೇಸರವನ್ನು ತಮ್ಮ ಇನ್ ಸ್ಟಾಗ್ರಾಂನ ವಿಡಿಯೋ ಮುಖಾಂತರ ವ್ಯಕ್ತಪಡಿಸಿದ್ದಾರೆ. “ಈಗ ನನ್ನ ಕಥೆ ಏನು ವಿರಾಟ್? ಈಗ ನನ್ನ ಕಥೆ ಏನು? ನಾನು ವಾಶ್ ರೂಮಿನಲ್ಲಿದ್ದಾಗ ಗೊತ್ತಾಯಿತು ನಿನಗೆ ಅನುಷ್ಕಾ ಜೊತೆ ಮದುವೆಯಾಗಿದೆ ಎಂದು” ಅಂತ ರಾಖಿ ಸಾವಂತ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಾಕಿದ್ದಾರೆ.

ಎರಡು ವರ್ಷಗಳ ಹಿಂದೆ ರಾಖಿ ಸಾವಂತ್ ವಿರಾಟ್ ಮೇಲಿರುವ ಪ್ರೀತಿಯ ಬಗ್ಗೆ ಹೇಳಿದ್ದರು. “ನನಗೆ ವಿರಾಟ್ ಎಂದರೆ ಇಷ್ಟ ಹಾಗೂ ಅನುಷ್ಕಾ ಇನ್ನೂ ಎಲ್ಲರ ಮುಂದೆ ತನ್ನ ಪ್ರೀತಿಯನ್ನು ಒಪ್ಪಿಕೊಂಡಿಲ್ಲ. ಆದರೆ ನಾನು ವಿರಾಟ್ ನನ್ನು ಇಷ್ಟಪಡುತ್ತೇನೆ ಹಾಗೂ ಇದು ಎಲ್ಲರ ಮುಂದೆ ಹೇಳುತ್ತೇನೆ. ಅನುಷ್ಕಾ ಇದೂವರೆಗೂ ಸಾರ್ವಜನಿಕವಾಗಿ ವಿರಾಟ್ ಮೇಲಿರುವ ಪ್ರೀತಿಯನ್ನು ಒಪ್ಪಿಕೊಂಡಿಲ್ಲ” ಎಂದು ರಾಖಿ ಮಾಧ್ಯಮಕ್ಕೆ ತಿಳಿಸಿದ್ದರು.

ವಿರಾಟ್ ಹಾಗೂ ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು, ಡಿಸೆಂಬರ್ 21 ದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ಮುಂಬೈನಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಯಲಿದೆ. ಇದಾದ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ ನಡೆಯಲಿದ್ದು, ಅನುಷ್ಕಾ ತನ್ನ ಪತಿ ವಿರಾಟ್ ಜೊತೆ ದಕ್ಷಿಣ ಆಫ್ರಿಕಾಗೆ ಹೋಗಲಿದ್ದಾರೆ.

Leave a Reply

Your email address will not be published. Required fields are marked *