ನವದೆಹಲಿ: ದೇಶದಲ್ಲೆಡೆ ಹಬ್ಬುತ್ತಿರುವ ಡೆಡ್ಲಿ ಕೊರೊನಾ ವೈರಸ್ ತಡೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಅವರು ವಿಡಿಯೋ ಮೂಲಕ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ.
ಕೊರೊನಾ ವೈರಸ್ ವಿಚಾರವಾಗಿ ವಿಶ್ವದ ಬಹುತೇಕ ಕ್ಷೇತ್ರಗಳು ಸ್ತಬ್ಧವಾಗಿವೆ. ಇಲ್ಲರೂ ಮನೆಯಿಂದ ಹೊರಗೆ ಬರುಲು ಭಯಪಡುತ್ತಿದ್ದಾರೆ. ಕೆಲ ಸೆಲೆಬ್ರಿಟಿಗಳು ಕೂಡ ಕೊರೊನಾ ವೈರಸ್ ತಡೆಯಲು ಹಲವಾರು ಟಿಪ್ಸ್ ಗಳು ಮತ್ತು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಈಗ ಈ ವಿಚಾರವಾಗಿ ಸ್ಟಾರ್ ಜೋಡಿ ವಿರಾಟ್ ಮತ್ತು ಅನುಷ್ಕಾ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
https://www.instagram.com/p/B98Skz4pt-s/?utm_source=ig_embed
ಪತಿ ಪತ್ನಿ ಜೊತೆಲ್ಲೇ ಕುಳಿತು ವಿಡಿಯೋ ಮಾಡಿದ್ದು, ಈ ವಿಡಿಯೋವನ್ನು ಅನುಷ್ಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದಾರೆ. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್‍ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಮನವಿ ಮಾಡಿಕೊಂಡಿದೆ.
Be alert, attentive and aware to combat the threat posed by the Covid 19. We, as responsible citizens, need to adhere to the norms put in place for our safety as announced by our Honourable Prime Minister Shri @NarendraModi ji. #IndiaFightsCorona
— Virat Kohli (@imVkohli) March 19, 2020
ಕೊರೊನಾ ವೈರಸ್ ಕುರಿತಾಗಿ ಸಾಲು ಸಾಲು ಟ್ವೀಟ್ ಮಾಡಿರುವ ಕೊಹ್ಲಿ ಅವರು, ಗಮನವಿರಲಿ ಕೊರೊನಾ ವೈರಸ್ ಅನ್ನು ಎದುರಿಸಲು ಜಾಗರೂಕರಾಗಿರಿ. ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ಸುರಕ್ಷತೆಗಾಗಿ ಗೌರವಾನ್ವಿತ ಪ್ರಧಾನಿ ಮೋದಿ ಅವರು ಘೋಷಿಸಿದಂತೆ ಜಾರಿಗೆ ತಂದಿರುವ ನಿಯಮಗಳಿಗೆ ಬದ್ಧರಾಗಿರಬೇಕು. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ವಿರುದ್ಧ ಹೊರಾಡೋಣ ಎಂದಿದ್ದಾರೆ.
Also, special mention to all the medical professionals in the country and around the globe for all the efforts being put in to fight the #CoronaVirus. Let's support them by taking care of ourself and everybody around us by maintaining good personal hygeine. #IndiaFightsCorona
— Virat Kohli (@imVkohli) March 19, 2020
ಅಲ್ಲದೆ ಕೊರೋನಾ ವೈರಸ್ ವಿರುದ್ಧ ಹೋರಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ದೇಶದ ಮತ್ತು ಜಗತ್ತಿನ ಎಲ್ಲ ವೈದ್ಯಕೀಯ ವೃತ್ತಿಪರರಿಗೆ ವಿಶೇಷ ನಮನಗಳು. ಉತ್ತಮ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಮೂಲಕ ನಾವು ಮತ್ತು ನಮ್ಮ ಸುತ್ತಲಿರುವ ಪ್ರತಿಯೊಬ್ಬರನ್ನು ವೈದ್ಯರಿಗೆ ಬೆಂಬಲ ನೀಡೋಣ ಎಂದು ವೈದ್ಯರ ಬಗ್ಗೆಯೂ ಕೂಡ ವಿರಾಟ್ ಅವರು ಟ್ವೀಟ್ ಮಾಡಿದ್ದಾರೆ.
ಕೊರೊನಾ ವೈರಸ್ ಮಹಾಮಾರಿಯಿಂದ ಕ್ರೀಡಾ ಜಗತ್ತು ಕೂಡ ತತ್ತರಿಸಿ ಹೋಗಿದೆ. ಕೊರೊನಾ ವೈರಸ್ ಭೀತಿಯಿಂದ ಭಾರತ ಮತ್ತು ದಕ್ಷಿಣ ಅಫ್ರಿಕಾ ವಿರುದ್ಧದ ಏಕದಿನ ಸರಣಿ ರದ್ದಾಗಿದೆ. ಪ್ರವಾಸಕ್ಕಾಗಿ ಭಾರತಕ್ಕ ಬಂದ ಸೌತ್ ಅಫ್ರಿಕಾ ಆಟಗಾರರು ಒಂದು ಪಂದ್ಯವನ್ನು ಆಡದೇ ತಮ್ಮ ದೇಶಕ್ಕೆ ವಪಾಸ್ ಮರಳಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ ಐಪಿಎಲ್ ಕೂಡ ಮುಂದಕ್ಕೆ ಹೋಗಿದೆ.