ಲಂಡನ್: ಟೆನಿಸ್ (Tennis) ಲೋಕದ ದಂತಕಥೆ, 20 ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದ ಸ್ವೀಡನ್‍ನ ರೋಜರ್ ಫೆಡರರ್ (Roger Federer) ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದಾರೆ.
Advertisement
2022ರ ಲೆವೆರ್ ಕಪ್ (Laver Cup) ಟೆನಿಸ್ ಟೂರ್ನಿಯ ಡಬಲ್ಸ್ ಪಂದ್ಯದ ಕೊನೆಯಲ್ಲಿ ಫೆಡರಲ್ ಭಾವೋದ್ವೇಗಕ್ಕೆ ಒಳಗಾದರು. ಇವರೊಂದಿಗೆ ದಶಕಗಳ ಕಾಲ ಟೆನಿಸ್ ಕೋರ್ಟ್‍ನಲ್ಲಿ ಬದ್ಧ ವೈರಿಗಳಂತೆ ಕಾದಾಡಿದ್ದ ರಫೇಲ್ ನಡಾಲ್ (Rafael Nadal) ಕೂಡ ಕಣ್ಣೀರು ಹಾಕಿದರು. ಪ್ರೇಕ್ಷಕರತ್ತ ಕೈಬೀಸಿ ಧನ್ಯವಾದ ಹೇಳಿದ ಫೆಡರಲ್ ವಿದಾಯ, ನೆರೆದಿದ್ದ ಎಲ್ಲರ ಕಣ್ಣಂಚಲ್ಲೂ ನೀರು ತರಿಸಿತು. ಟೆನಿಸ್ ಅಂಗಳದಲ್ಲಿ ವಿರಾಜಮಾನವಾಗಿ ಮೆರೆದಾಡಿದ್ದ ಫೆಡರಲ್ ಇಂದು ತಮ್ಮ ಆಟಕ್ಕೆ ಅಂತ್ಯ ಹಾಡಿದ್ದು, ಫೆಡರರ್ ತನ್ನ ಕೊನೆಯ ಡಬಲ್ಸ್ ಪಂದ್ಯದಲ್ಲಿ ಅಮೆರಿಕದ ಜ್ಯಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೋ ಅವರ ಜೋಡಿಯ ವಿರುದ್ಧ 4-6, 7-6(2), 11-9 ಸೆಟ್‍ಗಳಿಂದ ಸೋತರು. ಇದರೊಂದಿಗೆ ಫೆಡರಲ್‍ಗೆ ಸೋಲಿನ ವಿದಾಯ ಸಿಕ್ಕಂತಾಗಿದೆ. ಈ ವೇಳೆ ಮೈದಾನದಲ್ಲೇ ಫೆಡರಲ್ ಬಿಕ್ಕಿಬಿಕ್ಕಿ ಅತ್ತರು ಈ ವೇಳೆ ಜೊತೆಗಿದ್ದ ನಡಾಲ್ ಕೂಡ ಅಳಲು ಪ್ರಾರಂಭಿಸಿದರು. ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಟೆನ್ನಿಸ್‌ಗೆ ಗುಡ್‍ಬೈ ಹೇಳಿದ ಫೆಡರರ್
Advertisement
An emotional final farewell.#LaverCup | @rogerfederer pic.twitter.com/lSZb9KfvbN
— Laver Cup (@LaverCup) September 23, 2022
Advertisement
ಫೆಡರರ್ 2003ರಲ್ಲಿ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದಿದ್ದರು. ಅದಾದ ಬಳಿಕ 8 ವಿಂಬಲ್ಡನ್, 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 1,526 ಪಂದ್ಯಗಳನ್ನು ಆಡಿರುವ ರೋಜರ್, 1,251 ಪಂದ್ಯ ಗೆದ್ದಿದ್ದಾರೆ. 103 ಟ್ರೋಫಿ, 31 ಗ್ರ್ಯಾಂಡ್ ಸ್ಲಾಮ್ ಫೈನಲ್ ಆಡಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಮುಡಿಗೇರಿಸಿಕೊಂಡಿದ್ದಾರೆ. 5 ಬಾರಿ ನಂಬರ್ 1 ಆಟಗಾರನಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಬುಮ್ರಾ ಯಾರ್ಕರ್‌ಗೆ ಫಿಂಚ್ ಶಬ್ಬಾಸ್‍ಗಿರಿ – ಪಲ್ಟಿ ಹೊಡೆದು ಬೆರಗಾದ ಸ್ಮಿತ್
Advertisement
Who thought rivals can feel like this towards each other. That’s the beauty of sport. This is the most beautiful sporting picture ever for me????❤️????????. When your companions cry for you, you know why you’ve been able to do with your god given talent.Nothing but respect for these 2. pic.twitter.com/X2VRbaP0A0
— Virat Kohli (@imVkohli) September 24, 2022
ಫೆಡರಲ್ ವಿದಾಯಕ್ಕೆ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಮಾಡಿರುವ ಟ್ವೀಟ್ ಕೂಡ ಗಮನಸೆಳೆಯುತ್ತಿದ್ದು, ಪ್ರತಿಸ್ಪರ್ಧಿಗಳು ಕೊನೆಯ ಬಾರಿ ಈ ರೀತಿ ಕಾಣಿಸಿಕೊಳ್ಳಬಹುದೆಂದು ಯಾರು ಭಾವಿಸಿದ್ದರು. ಇದು ಕ್ರೀಡೆಯ ಸೌಂದರ್ಯ. ಇದು ನನ್ನ ಪಾಲಿಗೆ ಅತ್ಯಂತ ಸುಂದರವಾದ ಕ್ರೀಡಾ ಚಿತ್ರವಾಗಿದ್ದು, ನಿಮ್ಮ ಸಹ ಆಟಗಾರರು ನಿಮಗಾಗಿ ಅತ್ತಾಗ, ನೀವು ಈವರೆಗೆ ಕ್ರೀಡೆಯಲ್ಲಿ ಕಳೆದ ದಿನಗಳಿಗೆ ಸಿಕ್ಕ ದೊಡ್ಡ ಗೌರವವಾಗಿರುತ್ತದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.