ಲಕ್ನೋ: ಲಕ್ನೋ: ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಸದ್ಯ ಸುದ್ದಿಯಲ್ಲಿದ್ದಾರೆ. ಸೋಮವಾರ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಜಗಳ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ.
Advertisement
ಮೊದಲು ಈ ಘಟನೆಗೆ ಕಾರಣವಾಗಿದ್ದು, ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೌತಮ್ ಗಂಭೀರ್ ಮಾಡಿದ್ದ ವರ್ತನೆ. ಅಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್ನಿಂದ ರೋಚಕ ಜಯ ಸಾಧಿಸಿತ್ತು. ಈ ಗೆಲುವಿನ ಸಂಭ್ರಮದಲ್ಲಿ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಆರ್‌ಸಿಬಿ ಅಭಿಮಾನಿಗಳಿಗೆ ಸೈಲೆಂಟಾಗಿರಬೇಕು ಎಂದು ಕೈಸನ್ನೆ ಮಾಡಿದ್ದರು. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?
Advertisement
Advertisement
ಇದಕ್ಕೆ ಪ್ರತ್ಯುತ್ತರವಾಗಿ ವಿರಾಟ್ ಕೊಹ್ಲಿ ಕೂಡ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಟಾರ್ಗೆಟ್ ಮಾಡಿ ಸಂಭ್ರಮಿಸಿದ್ದರು. ಪ್ರತಿ ವಿಕೆಟ್ ಪಡೆದಾಗಲೂ ಫುಲ್ ಜೋಶ್‌ನಿಂದ ಸಂಭ್ರಮಿಸಿದರು. ಆದರೆ ಪಂದ್ಯದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ಹಾಗೂ ಕೊಹ್ಲಿ ನಡುವೆ ವಾಗ್ವಾದ ನಡೆಯಿತು. ಇದರಿಂದಾಗಿ ಐಪಿಎಲ್ ಮಂಡಳಿ ದಂಡದ ಬಿಸಿ ಮುಟ್ಟಿಸಿತು. ಬಳಿಕ ಆರ್‌ಸಿಬಿ ತಂಡದ ಡ್ರೆಸ್ಸಿಂಗ್ ರೂಂ ನಲ್ಲಿ ಕಾಣಿಸಿಕೊಂಡ ಕೊಹ್ಲಿ, ಗಂಭೀರ್‌ಗೆ ಕೌಂಟರ್ ಕೊಟ್ಟಿದ್ದಾರೆ. ಇದನ್ನೂ ಓದಿ: ನೆನಪಿದೆಯಾ.. ಅಂದು ಕೊಹ್ಲಿಗಾಗಿ ತನ್ನ ಪ್ರಶಸ್ತಿಯನ್ನೇ ಬಿಟ್ಟುಕೊಟ್ಟಿದ್ದರು ಗಂಭೀರ್
Advertisement
ನಿಮಗೆ ಕೊಡೋಕೆ ಗೊತ್ತಿದ್ರೆ, ಅದನ್ನ ಇಸ್ಕೋಳ್ಳೋಕು ಗೊತ್ತಿರಬೇಕು. ಇಲ್ಲದಿದ್ರೆ ಕೊಡೋಕೆ ಬರಬಾರದು, ಕೊಟ್ಟರೆ, ನಾವು ತಿರುಗಿಸಿ ಕೊಡ್ತೀವಿ, ಇಲ್ಲದಿದ್ರೆ ನೀವು ಕೊಡೋಕೆ ಬರಬಾರದು ಎಂದು ಪರೋಕ್ಷವಾಗಿ ಡಿಚ್ಚಿಕೊಟ್ಟಿದ್ದಾರೆ.