ಮುಂಬೈ: ಟೀಂ ಇಂಡಿಯಾ ನಾಯಕ, ರನ್ ಮೆಷಿನ್ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಹೊಡೆದಿದ್ದಾರೆ.
200ನೇ ಪಂದ್ಯದಲ್ಲಿ ಕೊಹ್ಲಿ 31ನೇ ಶತಕ ಹೊಡೆಯುವ ಮೂಲಕ ಏಕದಿನದಲ್ಲಿ ಶತಕ ಹೊಡೆದ ಆಟಗಾರರ ಪೈಕಿ ಎರಡನೇ ಸ್ಥಾನಕ್ಕೆ ಏರಿದರು. 62 ಎಸೆತದಲ್ಲಿ ಅರ್ಧಶತಕ ಹೊಡೆದ ಕೊಹ್ಲಿ 111 ಎಸೆತದಲ್ಲಿ ಶತಕ (4 ಬೌಂಡರಿ, 1 ಸಿಕ್ಸರ್) ಹೊಡೆದರು.
Advertisement
ಮೊದಲ 100 ಪಂದ್ಯದಲ್ಲಿ 13 ಶತಕ ಹೊಡೆದಿದ್ದರೆ, ನಂತರದ 100 ಪಂದ್ಯದಲ್ಲಿ ಕೊಹ್ಲಿ 18 ಶತಕ ಹೊಡೆದಿದ್ದಾರೆ. ಅಂತಿಮವಾಗಿ ಕೊಹ್ಲಿ 121 ರನ್(125 ಎಸೆತ, 9 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ 270 ಆಗಿದ್ದಾಗ 7ನೇ ಅವರಿಗೆ ಔಟಾದರು.
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 280 ರನ್ ಗಳಿಸಿದೆ.
Advertisement
ಏಕದಿನ ಶತಕ ಹೊಡೆದ ಆಟಗಾರರ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 463 ಪಂದ್ಯಗಳಿಂದ 49 ಶತಕ ಸಿಡಿಸುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಟಿಂಗ್ 375 ಪಂದ್ಯಗಳಿಂದ 30 ಶತಕ ಹೊಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ.
Advertisement
ಶ್ರೀಲಂಕಾದ ಸನತ್ ಜಯಸೂರ್ಯ 28, ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 26 ಶತಕ, ಶ್ರೀಲಂಕಾದ ಕುಮಾರ ಸಂಗಕ್ಕಾರ 25 ಶತಕ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 25 ಶತಕ ಹೊಡೆದಿದ್ದಾರೆ.