ಹಾವೇರಿ: ಜಿಲ್ಲೆಯಲ್ಲಿ ಕೋಳಿ ಕೂಗದ ಗ್ರಾಮವೊಂದಿದೆ. ಈ ಗ್ರಾಮದ ವಿಶೇಷ ಏನಂದ್ರೆ ಇಲ್ಲಿ ಕೋಳಿ ಇಲ್ಲ. ಜೊತೆಗೆ ಕುರಿಯೂ ಇಲ್ಲ. ಹೀಗಾಗಿ, ಇಲ್ಲಿ ಮಾಂಸ ಬಳಕೆಯೇ ಇಲ್ಲ. ಈ ಗ್ರಾಮವೇ ಇಂದಿನ ನಮ್ಮ ಪಬ್ಲಿಕ್ ಹೀರೋ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ಕುರಿ-ಕೋಳಿಯ ಶಬ್ದ ಕೇಳಲ್ಲ. ತಲೆ ತಲಾಂತರಗಳಿಂದಲೂ ಈ ಗ್ರಾಮದಲ್ಲಿ ಯಾರೊಬ್ಬರು ಕುರಿ, ಕೋಳಿ ಸಾಕಾಣಿಕೆ ಮಾಡ್ತಿಲ್ಲ. ಗ್ರಾಮದಲ್ಲಿ 150ಕ್ಕೂ ಅಧಿಕ ಜೈನಧರ್ಮದ ಕುಟುಂಬಗಳು, ನಾಲ್ಕು ವಿಶ್ವಕರ್ಮ ಕುಟುಂಬಗಳಿವೆ. 90 ರಷ್ಟು ಮಂದಿ ಕೃಷಿಯನ್ನೇ ಆಧರಿಸಿದ್ದಾರೆ. ಹೀಗಾಗಿ, ಇಲ್ಲಿ ಕುರಿಕೋಳಿಯ ಸಾಕಾಣಿಕೆ ಇಲ್ಲ. ಅಂದಮೇಲೆ ಅಹಿಂಸೆ ಅನ್ನೋದು ಇಲ್ಲವೇ ಇಲ್ಲ.
ಗ್ರಾಮದಲ್ಲಿ 24ನೇ ತೀರ್ಥಂಕರರ ದೇವಸ್ಥಾನವಿದೆ. ಹಲವಾರು ಜೈನಮುನಿಗಳು, ಯತಿಗಳು ಗ್ರಾಮಕ್ಕೆ ಆಗಮಿಸುತ್ತಾರೆ. ಜೊತೆಗೆ, ವ್ಯಾಜ್ಯ-ತಕರಾರು ಅನ್ನೋದೂ ಇಲ್ಲ. ಆದಾಗ್ಯೂ, ಸಣ್ಣಪುಟ್ಟ ಜಗಳವಾದ್ರೂ ರಾಜಿ ಪಂಚಾಯ್ತಿ ನಡೆಸಿಕೊಳ್ಳೋ ಇವರು ಪೊಲೀಸ್ ಠಾಣೆ ಮೆಟ್ಟಿಲೇರಲ್ಲ. ಹೀಗಾಗಿ ಜೈನಮುನಿ 108 ಚಿನ್ಮಯ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ನಮ್ಮ ಗ್ರಾಮವನ್ನ ಅಹಿಂಸಾ ಗ್ರಾಮ ಎಂದು ಘೋಷಣೆ ಮಾಡಿದ್ದಾರೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ.
https://www.youtube.com/watch?v=GKBP6vW50Xw