ದಾವಣಗೆರೆ: ಶನಿವಾರ ದಾವಣಗೆರೆ ನಗರದಲ್ಲಿ ನಡೆದ ಹಿಂದೂ ಮಹಾಸಭಾದ ಗಣಪತಿ ವಿಸರ್ಜನೆ ವೇಳೆ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿದ್ದ ಎಸ್‍ಐ ಒಬ್ಬರನ್ನ ಹೊತ್ತು ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದಾವಣಗೆರೆಯಲ್ಲಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ಠಾಣೆಯ ಶೂಟೌಟ್ ಪ್ರಕರಣದಲ್ಲಿ ಹೆಸರು ಮಾಡಿದ್ದ ಎಸ್‍ಐ ಸಿದ್ದೇಶ್ ಹಾಗೂ ಬಡವಾಣೆ ಠಾಣೆಯ ಪೊಲೀಸ್ ವೀರ್ ಬಸಪ್ಪ ಕುಸ್ಲಾಪುರ್ ಅವರನ್ನು ಯುವಕರು ಹೊತ್ತು ಸ್ಟೆಪ್ ಹಾಕಿದ್ದಾರೆ.
ಮಹಾನಗರ ಪಾಲಿಕೆ ಮುಂಭಾಗದಲ್ಲಿ ಗಣೇಶನ ಭಕ್ತರು ಪಿಎಸ್‍ಐ ಸಿದ್ದೇಶ್ ಅವರನ್ನ ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ. ಈ ದೃಶ್ಯವನ್ನು ಅಲ್ಲಿ ನೆರೆದಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಹೆಗಲ ಮೇಲೆ ಕೇಸರಿ ಶಾಲು ಹಾಕಿ ಸಂಭ್ರಮಿಸುತ್ತಿದ್ದ ಗಣೇಶ ಭಕ್ತರು ಅಲ್ಲೇ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಎಸ್‍ಐ ಸಿದ್ದೇಶ್ ಅವರನ್ನು ಏಕಾಏಕಿ ಹೊತ್ತು ಕುಣಿದಿದ್ದಾರೆ. ಕೆಳಗಿಳಿಸುವಂತೆ ಯುವಕರನ್ನು ಕೇಳಿಕೊಂಡರೂ ಯಾರೊಬ್ಬರೂ ಕೆಳಗಿಳಿಸದೇ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv