ಬೀಜಿಂಗ್: ಬಾಲಕಿಯೊಬ್ಬಳು ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ತನ್ನ ಹೋಂವರ್ಕ್ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.
ಬಾಲಕಿ ತಂದೆ ಕಾರನ್ನು ಚಲಾಯಿಸುತ್ತಿದ್ದರು. ಬಾಲಕಿ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಪುಸ್ತಕವನ್ನು ಇಟ್ಟುಕೊಂಡು ತನ್ನ ಹೋಂವರ್ಕ್ ಮಾಡಿದ್ದಾಳೆ.
Advertisement
ಚಲಿಸುತ್ತಿದ್ದ ಕಾರಿನ ಕಿಟಕಿಯಿಂದ ದೇಹವನ್ನು ಹೊರ ಹಾಕಿ ಕಾರಿನ ರೂಫ್ ಅನ್ನು ಡೆಸ್ಕ್ ರೀತಿ ಮಾಡಿಕೊಂಡು ಅದರ ಮೇಲೆ ತನ್ನ ಪುಸ್ತಕವನ್ನು ಇಟ್ಟುಕೊಂಡು ಬಾಲಕಿ ತನ್ನ ಹೋಂವರ್ಕ್ ಮಾಡಿದ್ದಾಳೆ. ಬಾಲಕಿ ಹೋಂವರ್ಕ್ ಮಾಡುತ್ತಿರುವುದನ್ನು ನೋಡಿದ ಜನರು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
Advertisement
Advertisement
ಬಾಲಕಿಯ ತಂದೆ ಕಾರು ಚಲಾಯಿಸುತ್ತಾ ಪಕ್ಕದ ಸೀಟಿನಲ್ಲಿ ಇದ್ದ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿದ್ದರು. ಆಗ ಅವರು ತನ್ನ ಮಗಳು ಕಾರಿನ ಕಿಟಕಿಯ ತುದಿಯಲ್ಲಿ ಕುಳಿತಿರುವುದನ್ನು ಗಮನಿಸಿದ್ದರು. ಆಗ ತಂದೆ ತಕ್ಷಣ ತನ್ನ ಮಗಳನ್ನು ಒಳಗೆ ಎಳೆದಿದ್ದಾರೆ.
Advertisement
ಆಕೆ ಚಲಿಸುತ್ತಿದ್ದ ಕಾರಿನ ರೂಫ್ ಮೇಲೆ ಹೋಂವರ್ಕ್ ಮಾಡುತ್ತಿರುವುದ್ದನ್ನು ನಾನು ಗಮನಿಸಲಿಲ್ಲ. ಇದಾದ ಬಳಿಕ ಈ ರೀತಿ ಮತ್ತೆ ಮಾಡಬಾರದು ಎಂದು ನನ್ನ ಮಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಬಾಲಕಿಯ ತಂದೆ ಮಿ. ಚೇಂಗ್ ತಿಳಿಸಿದ್ದಾರೆ.
ಸದ್ಯ ಬಾಲಕಿಯ ತಂದೆಯ ಡ್ರೈವಿಂಗ್ ಲೈಸೆನ್ಸ್ ಅಮಾನತುಗಳಿಸಲಾಗಿದ್ದು, ಕಂಪನಿ ಮಿ. ಚೇಂಗ್‍ನನ್ನು ಮತ್ತೆ ಟ್ಯಾಕ್ಸಿ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ: ಚಲಿಸುತ್ತಿದ ಸ್ಕೂಟಿ ಹಿಂಬದಿಯಲ್ಲಿ ಕೂತು ಹೋಂವರ್ಕ್ ಮಾಡಿದ ಬಾಲಕ- ವಿಡಿಯೋ ವೈರಲ್