ಬೆಂಗಳೂರು: ಚಲಿಸುತ್ತಿದ್ದ ಸ್ಕೂಟಿ ಹಿಂಬದಿ ಕೂತು ವಿದ್ಯಾರ್ಥಿಯೊಬ್ಬ ಹೋಂವರ್ಕ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಬಾಲಕ ನಡುರಸ್ತೆಯಲ್ಲಿ ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಎಂದು ಯೋಚಿಸದೆ ಗಂಭೀರವಾಗಿ ತನ್ನ ಹೋಂವರ್ಕ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ 75 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
Advertisement
Advertisement
ತಾಯಿ ತನ್ನ ಇಬ್ಬರು ಮಕ್ಕಳ ಜೊತೆ ಸ್ಕೂಟಿಯಲ್ಲಿ ಹೋಗುತ್ತಿದ್ದು, ಮುಂದೆ ಮಗಳನ್ನು ನಿಲ್ಲಿಸಿಕೊಂಡಿದ್ದಾರೆ. ಹಿಂಬದಿಯಲ್ಲಿ ಕುಳಿತಿದ್ದ ಬಾಲಕ ಸ್ಕೂಲ್ ಯೂನಿಫಾರ್ಮ್ ಹಾಕಿದ್ದು, ತಾಯಿ ತನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುವುದು ಗೊತ್ತಾಗುತ್ತದೆ.
Advertisement
Advertisement
ಬಾಲಕ ಚಲಿಸುತ್ತಿದ್ದ ಸ್ಕೂಟಿ ಹಿಂಬದಿ ಕೂತು ಹೋಂವರ್ಕ್ ಮಾಡುತ್ತಿದ್ದಾಗ ಸ್ವಲ್ಪವೂ ತನ್ನ ಧ್ಯಾನವನ್ನು ಬೇರಡೆ ನೀಡಿಲ್ಲ. ಇನ್ನೂ ಬಾಲಕನ ತಾಯಿ ಮಗನಿಗೆ ಹೋಂವರ್ಕ್ ಮಾಡಲು ಕಷ್ಟವಾಗಬಾರದೆಂದು ಸ್ಕೂಟಿಯನ್ನು ನಿಧಾನವಾಗಿ ಚಲಾಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ವಿಡಿಯೋ ಒಟ್ಟು 75 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕೇಂದ್ರ ಸಚಿವರಾದ ಕಿರಣ್ ರಿಜಿಜು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನು ಅಪ್ಲೋಡ್ ಮಾಡಿಕೊಂಡು, ನಾನು ತಾಯಿ ಹಾಗೂ ವಿದ್ಯಾರ್ಥಿಗೆ ಸೆಲ್ಯೂಟ್ ಮಾಡುತ್ತೇನೆ. ಆದರೆ ನಿಮ್ಮ ಸುರಕ್ಷಿತೆಗಾಗಿ ಟ್ರಾಫಿಕ್ ನಿಯಮದ ಕಡೆ ಗಮನವಿರಲಿ ಎಂದು ಬರೆದುಕೊಂಡಿದ್ದಾರೆ.