ಕಾಬುಲ್: ಕಾಲು ಕಳೆದುಕೊಂಡ ಬಾಲಕನಿಗೆ ವೈದ್ಯರು ಪ್ರಾಸ್ಥೆಟಿಕ್ ಕಾಲು ಜೋಡಣೆ ಮಾಡಿದ್ದಾರೆ. ಕೃತಕ ಕಾಲು ಜೋಡಣೆ ಮಾಡಿದ ತಕ್ಷಣವೇ ಬಾಲಕ ಖುಷಿಯಿಂದ ಕುಣಿದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಹ್ಮದ್ ಕಾಲು ಕಳೆದುಕೊಂಡ ಬಾಲಕ. ಅಪ್ಘಾನ್‍ನ ಲೋಗರ್ ನಲ್ಲಿ ಆದ ಗಣಿಗಾರಿಕೆಯಲ್ಲಿನ ಸ್ಫೋಟದಿಂದಾದ ಭೂ ಕುಸಿತದಿಂದಾಗಿ ಅಹ್ಮದ್ ತನ್ನ ಕಾಲನ್ನು ಕಳೆದುಕೊಂಡಿದ್ದನು. ಈಗ ಆತನಿಗೆ ಪ್ರಾಸ್ಥೆಟಿಕ್ ಕಾಲು ಹಾಕಿದ್ದು, ಆತ ಖುಷಿಯಿಂದ ಡ್ಯಾನ್ಸ್ ಮಾಡಿದ್ದಾನೆ.
Advertisement
Advertisement
ಈ ವಿಡಿಯೋದಲ್ಲಿ ಬಾಲಕ ಅಹ್ಮದ್ ತನ್ನ ಪ್ರಾಸ್ಥೆಟಿಕ್ ಕಾಲು ಜೋಡಣೆ ಆಗುತ್ತಿದ್ದಂತೆ ಎದ್ದು ಖುಷಿಯಿಂದ ಕುಣಿದಾಡಿದ್ದಾನೆ. ಅಲ್ಲಿದ್ದ ರೋಗಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿ ಅಹ್ಮದ್‍ನ ಖುಷಿ ನೋಡಿ ತಾವು ಕೂಡ ಸಂತೋಷಪಟ್ಟಿದ್ದಾರೆ.
Advertisement
ವೈರಲ್ ಆಗಿರುವ ಈ ವಿಡಿಯೋವನ್ನು ಆಫ್ಘಾನಿಸ್ತಾನದ ಅಂತರಾಷ್ಟ್ರೀಯ ರೆಡ್ ಕ್ರಾಸ್ ಆರ್ಥೋಪೇಡಿಕ್ ಸೆಂಟರ್ ನಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋಗೆ ಇದುವರೆಗೂ ಒಟ್ಟು 3 ಲಕ್ಷಕ್ಕೂ ಹೆಚ್ಚು ವ್ಯೂ ಹಾಗೂ ಶೇರ್ ಬಂದಿದೆ. ಅಲ್ಲದೆ 16,000ಕ್ಕೂ ಹೆಚ್ಚು ಲೈಕ್ಸ್ ಗಳು ಈ ವಿಡಿಯೋಗೆ ಬಂದಿದೆ.
Advertisement
ಈ ವಿಡಿಯೋ ನೋಡಿದ ಹಲವರು ರೆಡ್ ಕ್ರಾಸ್ ಆಸ್ಪತ್ರೆಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಕೆಲವರು ಬಾಲಕನ ಖುಷಿ ನೋಡಿ ಆತನನ್ನು ತಬ್ಬಿಕೊಂಡು ಒಂದು ಕೋಣೆಯಲ್ಲಿ ಜೋರಾಗಿ ಅಳಬೇಕು ಎಂದು ಅನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
Ahmad received artificial limb in @ICRC_af Orthopedic center, he shows his emotion with dance after getting limbs. He come from Logar and lost his leg in a landmine. This is how his life changed and made him smile. pic.twitter.com/Sg7jJbUD2V
— Roya رویا (@roya_musawi) May 6, 2019