ಲಕ್ನೋ: ಪೊಲೀಸ್‍ನೊಬ್ಬ ಕಳ್ಳನಂತೆ ಅಂಗಡಿಗೆ ಬಂದು ಬಲ್ಬ್ (Bulb) ಅನ್ನು ಕದಿಯುವ ವೀಡಿಯೋವೊಂದು (Video) ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ (Uttar Pradesh) ಪ್ರಯಾಗ್‍ರಾಜ್‍ನಲ್ಲಿ ಅಂಗಡಿಯೊಂದರ ಹೊರಗೆ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವೀಡಿಯೋ ವೈರಲ್ (Viral Video) ಆಗುತ್ತಿದ್ದಂತೆ ಪೊಲೀಸ್ ರಾಜೇಶ್ ವರ್ಮಾನನ್ನು ಅಮಾನತುಗೊಳಿಸಲಾಗಿದೆ. ಸಿಸಿಟಿವಿಯಲ್ಲಿ ಕಾನ್ಸ್‌ಟೆಬಲ್ (Constable) ರಾಜೇಶ್ ವರ್ಮಾ ಮುಚ್ಚಿರುವ ಅಂಗಡಿಯೊಂದರ ಕಡೆಗೆ ಆಕಸ್ಮಿಕವಾಗಿ ಆಚೆ ಈಚೆ ಅಡ್ಡಾಡ್ಡುತ್ತಿದ್ದ. ಈ ಸಂದರ್ಭದಲ್ಲಿ ಅಂಗಡಿಯ ಹೊರಗೆಯಿದ್ದ ಬಲ್ಬ್‌ನ್ನು ನೋಡಿದ ರಾಜೇಶ್ ವರ್ಮಾ ಬಲ್ಬ್‌ನ್ನು ತೆಗೆದು, ಯಾರಿಗೂ ತಿಳಿಯದಂತೆ ಜೇಬಿನೊಳಗೆ ಹಾಕಿಕೊಂಡಿದ್ದಾನೆ.
Advertisement
ये उत्तर प्रदेश के Prayagraj के फूलपुर थाने के दरोगा हैं।
जिन्होंने सुनसान जगह देखकर एलईडी बल्ब चुराकर जेब में रख लिया, लेकिन पास में लगे सीसीटीवी कैमरे में इनकी हरकत कैद हो गई । pic.twitter.com/eq0fSXRjuJ
— Deepak Verma (@Deepak_0102) October 14, 2022
Advertisement
ಮರುದಿನ ಬಲ್ಬ್ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಅಂಗಡಿಯಾತ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾನೆ. ಈ ವೇಳೆ ಸಾರ್ವಜನಿಕ ಸೇವೆ ಸಲ್ಲಿಸಬೇಕಾದ ಪೊಲೀಸ್ ಕಾನ್ಸ್‌ಟೆಬಲ್ ಬಲ್ಬ್‌ನ್ನು ಕದಿಯುತ್ತಿರುವ ವೀಡಿಯೋ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್‍ನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಮುರುಘಾ ಮಠಕ್ಕೆ ಹೊಸ ಶ್ರೀಗಳ ನೇಮಕ ಕಾನೂನು ಪ್ರಕಾರ ನಿರ್ಧಾರ: ಬೊಮ್ಮಾಯಿ
Advertisement
ಆರೋಪಿ ರಾಜೇಶ್ ವರ್ಮಾ ಇತ್ತೀಚೆಗಷ್ಟೇ ಬಡ್ತಿ ಹೊಂದಿದ್ದು, ಕಳೆದ ಎಂಟು ತಿಂಗಳಿಂದ ಫುಲ್‍ಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ನ್ಯಾಯ ಸಿಗೋದು ವಿಳಂಬವಾಗ್ತಿರೋದೇ ಜನರಿಗೆ ಬಹುದೊಡ್ಡ ಸಮಸ್ಯೆ: ಮೋದಿ ವಿಷಾದ