– ಅಜ್ಜಿ ಹೆಜ್ಜೆಗೆ ಕಿರಣ್ ಬೇಡಿ ಫಿದಾ
ಪಾಂಡಿಚೇರಿ: ನಗರದಲ್ಲಿ ಪೊಂಗಲ್ ಸಂಭ್ರಮಾಚರಣೆ ವೇಳೆ ಅಜ್ಜಿಯೊಬ್ಬರು ರೌಡಿ ಬೇಬಿ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋವನ್ನು ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರು ಅಜ್ಜಿ ಡ್ಯಾನ್ಸ್ ಗೆ ಫಿದಾ ಆಗಿದ್ದು, ಇಳಿ ವಯಸ್ಸಿನಲ್ಲೂ ಖುಷಿಯಿಂದ ಡ್ಯಾನ್ಸ್ ಮಾಡಿದ ಅಜ್ಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
Advertisement
Advertisement
ಪಾಂಡಿಚೇರಿಯಲ್ಲಿ ಕಿರಣ್ ಬೇಡಿ ಅವರು ನಗರದ ಪೌರ ಕಾರ್ಮಿಕರು ಹಾಗೂ ಸಚ್ಛತಾ ಕಾರ್ಪೊರೇಷನ್‍ನ ಮಹಿಳೆಯರೊಂದಿಗೆ ಪೊಂಗಲ್ ಆಚರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೇಳೆ ಕೆಲವು ಮಹಿಳೆಯರು ಖುಷಿಯಾಗಿ ಕುಣಿದಿದ್ದಾರೆ. ಅದರಲ್ಲೂ ವೃದ್ಧೆಯೊಬ್ಬರು ತಮಿಳಿನ ‘ಮಾರಿ-2’ ಚಿತ್ರದ ‘ರೌಡಿ ಬೇಬಿ’ ಹಾಡಿಗೆ ಸಖತ್ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ವೃದ್ಧೆಯ ಡ್ಯಾನ್ಸ್ ಗೆ ಸ್ವತಃ ಕಿರಣ್ ಬೇಡಿ ಅವರೇ ಫಿದಾ ಆಗಿದ್ದಾರೆ.
Advertisement
Very nice..jivan jine ka naam hai..
— Arvind Sahay (@sahay_arvind) January 14, 2020
Advertisement
ಈ ವಿಡಿಯೋ ಸುಮಾರು 28 ಸಾವಿರಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.
ಇನ್ನೊಂದು ಟ್ವೀಟ್‍ನಲ್ಲಿ ಪೊಂಗಲ್ ಸಂಭ್ರಮಾಚರಣೆಯ ಬಳಿಕ ಕಿರಣ್ ಬೇಡಿಯವರು ದಾನಿಗಳ ಜೊತೆ ಸೇರಿ ಪುರುಷ ಕಾರ್ಮಿಕರಿಗೆ ಟವಲ್ ಹಾಗೂ ಮಹಿಳೆಯರಿಗೆ ಸೀರೆ ಉಡುಗೊರೆಯಾಗಿ ನೀಡಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.
While the Multitasking staff from PWD and Municipalities got a towel as a Pongal Gift the 1500 Women of Swatchta Corp who keep Puducherry clean were gifted a saree each supported by donors. This was part of Pongal celebrations. pic.twitter.com/SoOsXEbARO
— Kiran Bedi (@thekiranbedi) January 14, 2020