ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿಗಾಗಿ ಬೃಹತ್ ಮರವೊಂದನ್ನು ಉರುಳಿಸಿದ ಪರಿಣಾಮ ನೂರಾರು ಪಕ್ಷಿಗಳು ಮಾರಣಹೋಮವಾದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತಿರುರಂಗದಿ ನಗರದ ವಿಕೆ ಪಡಿ ಎಂಬಲ್ಲಿ ನಡೆದಿದೆ.
ಸಾವಿರಾರು ಪಕ್ಷಿಗಳ ಮಾರಣಹೋಮವಾಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಪಕ್ಷಿಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಮರ ಉರುಳಿಸಿದ ಜೆಸಿಬಿ ಚಾಲಕನನ್ನು ಬಂಧಿಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯದೇ ಮರವನ್ನು ಉರುಳಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
Advertisement
Road widening kills.#roadkills pic.twitter.com/ofQarijATu
— Milind Pariwakam ???????? (@MilindPariwakam) September 1, 2022
Advertisement
ರಾಷ್ಟ್ರೀಯ ಹೆದ್ದಾರಿ 66 ಅನ್ನು ವಿಸ್ತರಣೆ ಮಾಡುವ ಸಲುವಾಗಿ ರಸ್ತೆ ಬದಿಯ ಮರಗಳನ್ನು ಕಡಿಯಲಾಗುತ್ತಿತ್ತು. ಅಂತೆಯೇ ಗುರುವಾರ ಭಾರೀ ಗಾತ್ರದ ಮರವನ್ನು ನೆಲಕ್ಕುರುಳಿಸಿದರಿಂದ ನೂರಾರು ಪಕ್ಷಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಳ್ಳುವುದು ಲೈಂಗಿಕ ಉದ್ದೇಶವನ್ನು ಸೂಚಿಸುತ್ತದೆ: ಮುಂಬೈ ಕೋರ್ಟ್
Advertisement
It takes bloody-mindedness of another level to bring down a tree laden with nesting birds and helpless chicks.
Regardless of place or time, our need for wider roads is so important and so immediate that even the most rudimentary environmental decency is no longer possible. https://t.co/JaH5Tj86nK
— M D Madhusudan (@mdmadhusudan) September 2, 2022
Advertisement
ಮರ ಕಡಿಯುವುದಕ್ಕೂ ಮುನ್ನ ಅವುಗಳಿಗೆ ಹಾರಲು ಅವಕಾಶ ನೀಡಬೇಕಿತ್ತು. ಇಲ್ಲವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೆ ಇದ್ಯಾವುದೂ ಮಾಡದೇ ಏಕಾಏಕಿ ಮರವನ್ನು ಉರುಳಿಸಿರುವ ಪರಿಣಾಮ ಗೂಡು ಸಮೇತ ಹಕ್ಕಿಗಳು ಮರದ ಕೊಂಬೆಗಳಿಗೆ ಸಿಲುಕಿ ಮೃತ ಪಟ್ಟಿವೆ. ಇನ್ನೂ ಕೆಲವು ಮರ ಬಿದ್ದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿ ಸಾವನ್ನಪ್ಪಿವೆ.
Why would they do without inspection and in breeding season ?? Crazy.. I remember I had asked to clean balcony and seeing a ???? nest told cleaners to wait till they fly .. give life.. don’t take it .as per convenience.. protect nature’s ????
— Deepak vijayvergiya (@deepakvijay74) September 2, 2022
ಹುಣಸೆ ಮರದಲ್ಲಿ ಶಿಳ್ಳೆ ಹೊಡೆಯುವ ಬಾತುಕೋಳಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಗೂಡುಕಟ್ಟಿಕೊಂಡು ಬದುಕು ನಡೆಸುತ್ತಿದ್ದವು. ಈ ಬಡ ಜೀವಿಗಳ ಜೀವನದ ಬಗ್ಗೆ ಹೆಚ್ಚು ಗಮನ ಹರಿಸದ ಜನರ ಮೇಲೆ ಇದೀಗ ನೆಟ್ಟಿಗರು ಗರಂ ಆಗಿದ್ದಾರೆ. ಈ ಪಕ್ಷಿಗಳನ್ನು ಉಳಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೆ ಮರವನ್ನು ಉರುಳಿಸಲು ನಿರ್ಧರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.