ನವದೆಹಲಿ: ಎಷ್ಟೋ ಜನರು ‘ಕರ್ಮ’ ಎಂಬ ಕಾನ್ಸೆಪ್ಟ್ ನಂಬುತ್ತಾರೆ. ಇದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ.
ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು ನಮ್ಮ ಹತ್ತಿರ ಬಂದೇ ಬರುತ್ತೆ ಎಂಬುದನ್ನು ಹಲವು ಜನರು ನಂಬುತ್ತಾರೆ. ಈಗ ಕರ್ಮಕ್ಕೆ ಸಂಬಂಧಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ನಾಯಿ ತನ್ನ ಗಾಡಿ ಪಕ್ಕ ನಿಂತಿದೆ ಎಂದು ಕೋಪದಿಂದ ಬರುತ್ತಾನೆ. ಬಂದ ತಕ್ಷಣ ನಾಯಿಯನ್ನು ಒದೆಯಲು ಕಾಲು ಎತ್ತುತ್ತಾನೆ. ಕೊಡಲೇ ನಾಯಿ ಅಲ್ಲಿಂದ ಓಡಿ ಹೋಗುತ್ತೆ. ನಿಯಂತ್ರಣ ಸಿಗದೇ ಆ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ. ಇದನ್ನೂ ಓದಿ: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಳ್ಳಾಟಕ್ಕೆ ರೋಸಿ ಹೋದ ರೈತರು
Answer to all those who called the man caring for the dog as pagal.Animals are silent they can't hit u but karma will.
— Kausambi Bhattacharya (@KausambiBhatta1) February 21, 2022
ಟ್ವಿಟ್ಟರ್ ನಲ್ಲಿ ನೇಚರ್ಹೋಲಿಕ್ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಈ ವೀಡಿಯೋ ಶೇರ್ ಮಾಡಿದ ಅವರು, ‘ಪರ್ಫೆಕ್ಟ್ ಕರ್ಮಾ’ ಎಂದು ಬರೆದು ನಗುವಿನ ಎಮೋಜಿ ಹಾಕಿ ಪೋಸ್ಟ್ ಮಾಡಿದ್ದಾರೆ. ವೀಡಿಯೋವನ್ನು ಫೆ.19 ರಂದು ಹಂಚಿಕೊಂಡಿದ್ದು, ನೆಟ್ಟಿಗರು ವೀಡಿಯೋ ನೋಡಿ ಅವನಿಗೆ ಈ ರೀತಿ ಆಗಲೇ ಬೇಕು. ಅವನಿಗೆ ಸರಿಯಾಗಿ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ.
https://twitter.com/Natureholic2/status/1494825736313573378?ref_src=twsrc%5Etfw%7Ctwcamp%5Etweetembed%7Ctwterm%5E1494825736313573378%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-man-attempts-to-kick-stray-dog-gets-instant-karma-watch-5250648%2F
ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲಕ್ಷಗಟ್ಟಲೇ ಜನರು ವೀಡಿಯೋವನ್ನು ವೀಕ್ಷಿಸಿದ್ದು, ಶೇರ್ ಮಾಡುತ್ತಿದ್ದಾರೆ. ವೀಡಿಯೋ ನೋಡಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೆಡ್ ಕಾನ್‌ಸ್ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ