ಕೊಲ್ಕತ್ತಾ: ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ತನ್ನ ಬೌಲಿಂಗ್ ನಲ್ಲಿ ಔಟ್ ಆದ ಕೊಹ್ಲಿಯನ್ನು ರಾಣಾ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬ ಕಿರಿಯ ಆಟಗಾರ ಭಾರತ ತಂಡದ ನಾಯಕನನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ರಾಣಾ ಒಂದು ಓವರ್ ಎಸೆದು 11 ರನ್ ನೀಡಿ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ವಿಕೆಟ್ ಪಡೆದಿದ್ದರು.
Advertisement
2 ವಿಕೆಟ್ ಕಳೆದು ಕೊಂಡು 127 ರನ್ ಗಳಿಸಿದ್ದ ಆರ್‌ಸಿಬಿ ಹಠಾತ್ ಎರಡು ವಿಕೆಟ್ ಕಳೆದುಕೊಂಡ ಪರಿಣಾಮ 14.3 ಓವರ್ ಗಳಲ್ಲಿ 127 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
Advertisement
Advertisement
ಮೊದಲ ಪಂದ್ಯದಲ್ಲೇ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಶರಣಾಗಿದ್ದು, 4 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಕೆಕೆಆರ್ ಶುಭಾರಂಭ ಮಾಡಿದೆ. 177 ರನ್ ಗಳ ಸವಾಲನ್ನು ಪಡೆದ ಕೋಲ್ಕತ್ತಾ 18.5 ಓವರ್ ಗಳಲ್ಲಿ 177 ರನ್ ಹೊಡೆಯುವ ಮೂಲಕ ಜಯದ ಖಾತೆ ತೆರೆದಿದೆ.
Advertisement
ಆರ್‌ಸಿಬಿ ಗುರಿ ಬೆನ್ನತ್ತಿದ ಕೆಕೆಆರ್ ಆರಂಭಿಕ ಆಘಾತ ಕ್ರಿಸ್ ಲಿನ್ (5) ಪಡೆದ ಬಳಿಕವೂ ಸುನೀಲ್ ನರೇನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್ 4 ಬೌಂಡರಿಗಳಿಂದ ಅರ್ಧ ಶತಕ ಹೊಡೆದು ಔಟಾದರು. ಈ ವೇಳೆ ಉಮೇಶ್ ಯಾದವ್ ಮಿಂಚಿನ ದಾಳಿ ನಡೆಸಿ ನರೇನ್ (50), ರಾಬಿನ್ ಉತ್ತಪ್ಪ (13) ವಿಕೆಟ್ ಪಡೆದು ಕೆಕೆಆರ್ ವೇಗಕ್ಕೆ ಕಡಿವಾಣ ಹಾಕಿದರು.
ಬಳಿಕ ಕ್ರೀಸಿಗಿಳಿದ ನಾಯಕ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ನಿಧಾನಗತಿಯ ಬ್ಯಾಟಿಂಗ್ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ತಲಾ ಎರಡು ಬೌಂಡರಿ, ಸಿಕ್ಸರ್ ಸಿಡಿಸಿದ್ದ ರಾಣಾ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಉರುಳುತ್ತಿದ್ದರೂ ದಿನೇಶ್ ಕಾರ್ತಿಕ್ ಔಟಾಗದೇ 35 ರನ್(29 ಎಸೆತ, 4 ಬೌಂಡರಿ) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. ಆರ್‌ಸಿಬಿ ಪರ ಬ್ಯಾಟಿಂಗ್ ಆರಂಭಿಸಿದ ಕ್ವಿಂಟನ್ ಡಿ ಕಾಕ್ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಳಿಕ ಕ್ರೀಸಿಗಿಳಿದ ನಾಯಕ ಕೊಹ್ಲಿ, ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಜೊತೆ ಸೇರಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಈ ವೇಳೆ 27 ಎಸೆತಗಳಲ್ಲಿ 43 ರನ್ ಗಳಿಸಿದ್ದ ಮೆಕಲಮ್ ಸುನೀಲ್ ನರೈನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಎರಡನೇ ವಿಕೆಟ್ ಗೆ ಕೊಹ್ಲಿ, ಮೆಕಲಮ್ ಜೋಡಿ 41 ರನ್ ಜೊತೆಯಾಟ ನೀಡಿತ್ತು.
ಬಳಿಕ ಸ್ಫೋಟಕ ಆಟಗಾರ ಎಬಿಡಿ 22 ಎಸೆತಗಳಲ್ಲಿ 5 ಸಿಕ್ಸರ್, 1 ಬೌಂಡರಿ ನೆರವಿನಿಂದ 44 ರನ್ ಸಿಡಿಸಿ 3ನೇ ವಿಕೆಟ್ ಗೆ 64 ರನ್ ಸೇರಿಸಿದರು. ಈ ವೇಳೆ 15ನೇ ಓವರ್‍ನ ಎಸೆದ ನಿತೀಶ್ ರಾಣಾ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ನಿಧಾನಗತಿಯ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ 33 ಎಸೆತಗಳಲ್ಲಿ 31 ರನ್ ಗಳಿಸಿದ್ದ ವೇಳೆ ಇದೇ ಓವರ್ ನಲ್ಲಿ ಬೌಲ್ಡ್ ಆಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಸರ್ಫರಾಜ್ ಖಾನ್ (6) ಬಂದಷ್ಟೇ ವೇಗದಲ್ಲಿ ಔಟಾದರು. ಇನ್ನಿಂಗ್ಸ್ ಕೊನೆಯಲ್ಲಿ ಮಂದೀಪ್ ಸಿಂಗ್ ಬಿರುಸಿನ ಆಟವಾಡಿ ಕೇವಲ 18 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿ ನೆರವಿನಿಂದ 37 ರನ್ ಸಿಡಿಸಿ ತಂಡದ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.
ರೈಡರ್ಸ್ ಪರ ವಿನಯ್ ಕುಮಾರ್, ನಿತೀಶ್ ರಾಣಾ, 2 ಪಡೆದರೆ. ಜಾನ್ಸನ್ ಚಾವ್ಲಾ, ಸುನೀಲ್ ನರೇನ್ ತಲಾ ಒಂದು ವಿಕೆಟ್ ಪಡೆದರು.
https://twitter.com/VinayTr85616518/status/983006469254721536