ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಬಾರಾಮುಲ್ಲಾದಲ್ಲಿ (Baramulla) ಭದ್ರತಾ ಪಡೆಗಳು ಬಂಧಿಸಿದ್ದ ಭಯೋತ್ಪಾದಕ ತನ್ನ ಆಕ್ರಮಣಕಾರಿ ರೈಫಲ್‌ನಿಂದ ಗುಂಡು ಹಾರಿಸಿ, ಕಟ್ಟದಿಂದ ಎಸ್ಕೇಪ್ ಆದ ಆಗಿರುವ ಡ್ರೋನ್ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ (Socail Media) ಸದ್ದು ಮಾಡುತ್ತಿದೆ.
ಬಾರಾಮುಲ್ಲಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿರುವುದಾಗಿ ಸೇನಾಧಿಕಾರಿಗಳು ತಿಳಿಸಿದ್ದು, ಇದು ಗಮನಾರ್ಹ ಯಶಸ್ಸು ಎಂದೇ ಬಣ್ಣಿಸಿದ್ದಾರೆ.ಇದನ್ನೂ ಓದಿ: ಮಂಗಳೂರಿನ ಕಾಟಿಪಳ್ಳದ ಬದ್ರಿಯಾ ಮಸೀದಿ ಮೇಲೆ ಕಲ್ಲು ತೂರಾಟ!
Advertisement
Advertisement
#NDTVWorld | Video: Terrorist Runs For Cover In J&K, Cut Down By Heavy Fire From Armyhttps://t.co/EeNZ2yLQu4 pic.twitter.com/puBLIdXFRL
— NDTV (@ndtv) September 16, 2024
Advertisement
ಇನ್ನೂ ಈ ಬಗ್ಗೆ ಸೇನೆಯ ಸೆಕ್ಟರ್-10 ರಾಷ್ಟ್ರೀಯ ರೈಫಲ್ಸ್ ಬ್ರಿಗೇಡಿಯರ್ (Rashtriya Rifles Brigadier) ಸಂಜಯ್ ಕನ್ನೋತ್ ಮಾತನಾಡಿ, ಬಾರಾಮುಲ್ಲಾದ ಚಕ್ ಟಪ್ಪರ್ ಕ್ರೀರಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಲಾಯಿತು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
Advertisement
ಡ್ರೋನ್ ವೀಡಿಯೋ ವೈರಲ್:
ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಡ್ರೋನ್ ವೀಡಿಯೋದಲ್ಲಿ ಭಯೋತ್ಪಾದಕನು ಕಟ್ಟಡವೊಂದರಿಂದ ಹೊರನುಸುಳಿ ಅಲ್ಲಿಂದ ಹತ್ತಿರದಲ್ಲಿರುವ ಮರಗಳ ಕಡೆಗೆ ತಲುಪುತ್ತಾನೆ. ಆಗ ಗುಂಡಿನ ಚಕಮಕಿ ಶುರುವಾಗಿದ್ದು, ಸ್ಪಷ್ಟವಾಗಿ ಸೆರೆಯಾಗಿದೆ. ಈ ವೇಳೆ ಸೈನಿಕರು ಹಾರಿಸಿದ ಗುಂಡುಗಳು ಕಾಂಕ್ರೀಟ್ ಗೋಡೆಗಳಿಗೆ ತಾಕಿ ಧೂಳು ಆವರಿಸುತ್ತದೆ. ಈ ಸಮಯದಲ್ಲಿ ಮತ್ತಷ್ಟು ಗುಂಡಿನ ಚಕಮಕಿ ನಡೆದು, ಮೂವರು ಭಯೋತ್ಪಾದರನ್ನು ಸೇನೆ ಹೊಡೆದುರುಳಿಸುತ್ತದೆ.
ಇತ್ತೀಚೆಗೆ ಕುಪ್ವಾರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ (Encounter) ಇಬ್ಬರು ಸೇನಾ ಯೋಧರು ಹುತಾತ್ಮರಾಗಿದ್ದರು.ಇದನ್ನೂ ಓದಿ: Mandya | ನಾಗಮಂಗಲದಲ್ಲಿ ಖಾಕಿ ಹೈ ಅಲರ್ಟ್ – ಈದ್ ಮಿಲಾದ್ ಹಿನ್ನೆಲೆ ಪೊಲೀಸ್ ಸರ್ಪಗಾವಲು
ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18 ರಿಂದ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ನಡುವೆ ಭಯೋತ್ಪಾದನಾ ಚಟುವಟಿಕೆಗಳು ಮತ್ತಷ್ಟು ಹೆಚ್ಚಾಗಿವೆ.