Latest

ಮರಿ ಆನೆಯನ್ನು ತಾಯಿ ಬಳಿ ಸೇರಿಸಿದ ಅರಣ್ಯ ಅಧಿಕಾರಿಗಳು – ವೀಡಿಯೋ ವೈರಲ್

Published

on

Share this

ಚೆನ್ನೈ: ಮರಿ ಆನೆಯನ್ನು ತಾಯಿ ಬಳಿ ಸೇರಿಸಲು ಅರಣ್ಯ ಅಧಿಕಾರಿಗಳು ಸಹಾಯ ಮಾಡಿದ ವೀಡಿಯೋ ಹೃದಯಸ್ಪರ್ಶಿಯಾಗಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ತಮಿಳುನಾಡಿನ ಅರಣ್ಯದಲ್ಲಿ ಮರಿ ಆನೆಯೊಂದು ಹಳ್ಳಕ್ಕೆ ಬಿದ್ದಿದ್ದು, ಅದನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ. ಬಿದ್ದ ಕಾರಣ ಮರಿ ಆನೆಗೆ ಸ್ವಲ್ಪ ಗಾಯವಾಗಿದ್ದು, ಅದಕ್ಕೆ ಚಿಕಿತ್ಸೆಯನ್ನು ನೀಡಲಾಗಿದೆ. ನಂತರ ಅರಣ್ಯ ಅಧಿಕಾರಿಗಳ ತಂಡ ಆ ಮರಿ ಆನೆಗೆ ತಾಯಿಯನ್ನು ಹುಡುಕಲು ಸಹಾಯ ಮಾಡಿದ್ದು, ನಂತರ ತಾಯಿಯ ಜೊತೆಗೆ ಸೇರಿಸಿದ್ದಾರೆ. ಈ ವೀಡಿಯೋ ಮನ ಮುಟ್ಟುವಂತೆ ಇದೆ. ಇದನ್ನೂ ಓದಿ: ಥ್ರೋಬ್ಯಾಕ್ ವೀಡಿಯೋ ಎಂದು ವೈರಲ್ ವೀಡಿಯೋ ಶೇರ್ ಮಾಡಿದ ಡಿಡಬ್ಲ್ಯೂಆರ್

ಗಾಯಗೊಂಡಿದ್ದ ಮರಿ!

ಭಾರತೀಯ ಅರಣ್ಯ ಅಧಿಕಾರಿ ಸುಧಾ ರಾಮನ್ ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ಪುಟ್ಟ ಮರಿ ಆನೆಯು ತಮಿಳುನಾಡು Z+ ಅರಣ್ಯ ಅಧಿಕಾರಿಗಳ ತಂಡದ ಜೊತೆಗೆ ಭದ್ರತೆಯೊಂದಿಗೆ ಮತ್ತೆ ತನ್ನ ತಾಯಿಯನ್ನು ಸೇರಿಕೊಳ್ಳಲು ಸಂತೋಷದಿಂದ ನಡೆಯುತ್ತಿದೆ. ಮೊದಲು ಈ ಮರಿ ಏಕಾಂಗಿಯಾಗಿ ಮತ್ತು ಗಾಯಗೊಂಡು ನಮಗೆ ಸಿಕ್ಕಿತು. ಟಿಎನ್ ಅರಣ್ಯ ತಂಡವು ಮರಿಯನ್ನು ರಕ್ಷಿಸಿ, ಚಿಕಿತ್ಸೆ ನೀಡಿ ಮತ್ತು ತಾಯಿಯೊಂದಿಗೆ ಸೇರಲು ಕಾವಲಾಗಿ ನಿಂತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

200ಕ್ಕೂ ಹೆಚ್ಚು ಬಾರಿ ರೀ ಟ್ವೀಟ್!

ಈ ವೀಡಿಯೋದಲ್ಲಿ ಮರಿ ಆನೆ ಕಾಡಿನಲ್ಲಿ ಅರಣ್ಯ ಅಧಿಕಾರಿಗಳ ಜೊತೆಯಲ್ಲಿ ಜಾಗರೂಕತೆಯಿಂದ ಮತ್ತು ಕಾವಲಿನಲ್ಲಿ ಸುರಕ್ಷಿತವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಅರಣ್ಯ ತಂಡದ ಈ ಪ್ರಯತ್ನವನ್ನು ಎಲ್ಲರೂ ಪ್ರಶಂಸಿದ್ದು, ಈ ವೀಡಿಯೋವನ್ನು 200ಕ್ಕೂ ಹೆಚ್ಚು ಬಾರಿ ರೀ ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ದುರ್ಗಾ ದೇವಿ ರೀತಿ ಮಮತಾ ಬ್ಯಾನರ್ಜಿ ವಿಗ್ರಹ ಸ್ಥಾಪನೆ

ಸುಂದರವಾದ ದೃಶ್ಯ

ಎಲ್ಲ ಅರಣ್ಯ ಅಧಿಕಾರಿಗಳಿಗೆ ಸಲ್ಯೂಟ್. ನಿಮ್ಮ ಪರಿಶ್ರಮದಿಂದ ಪ್ರಕೃತಿ ಮತ್ತು ಮಾನವೀಯತೆಯನ್ನು ಉಳಿಸುತ್ತಿದ್ದೀರಾ ಎಂದು ವೀಕ್ಷಕರು ಕಾಮೆಂಟ್ ಮಾಡಲಾಗಿದೆ. ಆ ಮರಿ ಆನೆ ಅರಣ್ಯ ತಂಡವನ್ನು ನಂಬಿ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದರೆ ವಿಶ್ವದಲ್ಲಿ ಸಕಾರಾತ್ಮಕತೆ ಇದೆ ಎಂದು ನಂಬಬಹುದು ಎಂದು ಕಾಮೆಂಟ್ ಮಾಡಿದ್ದು, ಇದು ಎಂಥಹ ಸುಂದರವಾದ ದೃಶ್ಯ, ಆ ಮರಿ ಆನೆ ಅವರ ಕುಟುಂಬದವರ ಬಳಿ ಸುರಕ್ಷತೆಯಿಂದ ಸೇರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಹಣೆಗೆ ಗುಂಡು ಹಾರಿಸಿಕೊಂಡು 71 ವರ್ಷದ ವೃದ್ಧ ಸಾವು

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications