ಒಟ್ಟಾವಾ: ಯಾರಿಗಾದರೂ ಸಹಾಯ ಮಾಡಬೇಕು ಎಂದು ಅನಿಸಿದ್ರೆ ಮನುಷ್ಯ ನಾನಾ ರೀತಿಯ ಉಪಾಯಗಳನ್ನು ಮಾಡುತ್ತಾನೆ. ಅದಕ್ಕೆ ಸಾಮಾನ್ಯವಾಗಿ ನಾವು ಯಾರಾದರೂ ತುಂಬಾ ಅವಶ್ಯಕತೆ ಇದ್ದಾಗ ಸಹಾಯ ಮಾಡಿಲ್ಲವೆಂದರೆ ಆತನಿಗೆ ಮಾನವೀಯತೆಯಿಲ್ಲ ಎಂದು ಕರೆಯುತ್ತೇವೆ. ಅದೇ ರೀತಿ ಇಲ್ಲೊಬ್ಬ ಮೀನುಗಾರ ಆಕ್ಟೋಪಸ್‍ನ ಹಿಡಿತದಲ್ಲಿದ್ದ ಹದ್ದುವನ್ನು ಹೇಗೆ ಕಾಪಾಡುತ್ತಾನೆ ಎಂಬ ವೀಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.
Advertisement
ಕೆನಡಾದ ವ್ಯಾಂಕೋವರ್‌ನಲ್ಲಿ ಮೀನುಗಾರರ ಗುಂಪು ವೀಡಿಯೋವನ್ನು ಸೆರೆಹಿಡಿದಿದೆ. ಹದ್ದುವನ್ನು ಆಕ್ಟೋಪಸ್ ಪೂರ್ತಿಯಾಗಿ ಆಕ್ರಮಿಸಿಕೊಂಡಿದ್ದು, ತನ್ನನ್ನು ಬಿಡಿಸಿಕೊಳ್ಳಲು ಹದ್ದು ಹೆಣಗಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಮೀನುಗಾರರು ಮನೆಗೆ ಹೋಗುತ್ತಿದ್ದಾಗ ಹದ್ದಿನ ಕೂಗು ಕೇಳಿಸಿಕೊಂಡಿದ್ದು, ಸಹಾಯಕ್ಕೆ ಮುಂದಾಗಿದ್ದಾರೆ. ಈ ವೇಳೆ ತಮ್ಮ ಬಳಿ ಇದ್ದ ಕುಕ್ಕೆಯ ಸಹಾಯದಿಂದ ಮೀನುಗಾರರು ಹದ್ದುವನ್ನು ಬಚಾವ್ ಮಾಡಿದ್ದಾರೆ. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್
Advertisement
Advertisement
ವೀಡಿಯೋ ಮುಗಿಯುತ್ತಿದ್ದಂತೆ, ಹದ್ದು ಮರದ ಬುಡದಲ್ಲಿ ಕುಳಿತಿರುವುದು ಕಂಡುಬರುತ್ತದೆ. ನಂತರ ಆಕ್ಟೋಪಸ್ ನೀರಿಗೆ ಬಿಡಲಾಗುತ್ತೆ. ವೀಡಿಯೋ ನೋಡಿದ ನೆಟ್ಟಿಗರು ಖುಷ್ ಆಗಿ ‘ಒಳ್ಳೆಯ ಕೆಲಸ’ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಇದೇ ರೀತಿ ಮುಂದುವರೆಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಹಲವು ವರ್ಷಗಳ ಹಿಂದೆ ಸೆರೆಯಿಡಿದಿದ್ದು, ಈಗ ವೈರಲ್ ಆಗಿದೆ.