ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಮಾಜಿ ಗೆಳೆಯನ ಜೊತೆ ಪ್ರಿಯಕರನ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
ಬಾಲಿವುಡ್ ಸ್ಟಾರ್ ಕರಣ್ ಜೋಹರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ರಣ್‍ಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ರಣ್‍ಬೀರ್ ಹಾಗೂ ದೀಪಿಕಾ ಜೊತೆಯಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ.
ಯೇ ಜವಾನಿ ಹೈ ದಿವಾನಿ, ಚೆನ್ನೈ ಎಕ್ಸ್ ಪ್ರೆಸ್, ಬಾಜಿರಾವ್ ಮಸ್ತಾನಿ ಹಾಗೂ ಹೇ ದಿಲ್ ಹೈ ಮುಷ್ಕಿಲ್ ಚಿತ್ರದ ಹಾಡಿಗೆ ಡ್ಯಾನ್ಸ್ ಹಾಡಿದ್ದಾರೆ. ನಂತರ ನಿರ್ದೇಶಕ ಕರಣ್ ಜೋಹರ್ ರಣವೀರ್ ಸಿಂಗ್ ಅಭಿನಯದ ‘ಬಾಜಿರಾವ್ ಮಸ್ತಾನಿ’ ಚಿತ್ರದ ‘ಮಲ್ಹಾರಿ’ ಹಾಡಿಗೆ ಇಬ್ಬರಿಗೂ ಡ್ಯಾನ್ಸ್ ಆಫರ್ ಮಾಡಿಸಿದ್ದಾರೆ.
ಕರಣ್ ಜೋಹರ್ ಡ್ಯಾನ್ಸ್ ಆಫರ್‍ಗೆ ರಣ್‍ಬೀರ್ ಹಾಗೂ ದೀಪಿಕಾ ಅವರಿಗೆ ಹಾಡಿನ ಸ್ಟೆಪ್ಸ್ ಮರೆತು ಹೋಗಿತ್ತು. ನಂತರ ದೀಪಿಕಾ ತಾವು ಏನು ಡ್ಯಾನ್ಸ್ ಮಾಡಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ ಎಂದು ಪ್ರತಿಕೆಯೊಂದು ವರದಿ ಮಾಡಿದೆ.
ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಹಾಡಿನ ಸಿಗ್ನೇಚರ್ ಸ್ಟೆಪ್ ಮಾಡಬೇಕಿತ್ತು. ರಣ್‍ಬೀರ್ ಹಾಗೂ ದೀಪಿಕಾ ಎಲ್ಲ ಹಾಡಿನ ಸಿಗ್ನೇಚರ್ ಸ್ಟೆಪ್ ಮಾಡಿದ್ದರು. ಆದರೆ ರಣ್‍ವೀರ್ ಸಿಂಗ್ ನಟಿಸಿದ ಬಾಜಿರಾವ್ ಮಸ್ತಾನಿ ಚಿತ್ರದ ಮಲ್ಹಾರಿ ಹಾಡಿನ ಸಿಗ್ನೇಚರ್ ಸ್ಟೆಪ್‍ನನ್ನು ಮರೆತು ಹೋಗಿದ್ದರು.
ರಣ್‍ವೀರ್ ಹಾಗೂ ದೀಪಿಕಾ ಇದುವರೆಗೂ ಬಾಲಿವುಡ್‍ನಲ್ಲಿ ಬಚನಾ ಹೇ ಹಸಿನೋ, ಯೇ ಜವಾನಿ ಹೇ ದಿವಾನಿ ಹಾಗೂ ತಮಾಶಾ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ರಣ್‍ಬೀರ್ ಕಪೂರ್, ಸಂಜಯ್ ದತ್ತ್ ಜೀವನ ಚರಿತ್ರೆಯ ಬ್ರಹ್ಮಾಸ್ತ್ರ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ದೀಪಿಕಾ ಪದ್ಮಾವತ್ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.