ಮುಂಬೈ: ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಶನಿವಾರ ಸಂಜೆ ಒಂದೇ ರನ್‌ವೇಯಲ್ಲಿ (Runway) ಏರ್ ಇಂಡಿಯಾ (Air India) ವಿಮಾನ ಟೇಕಾಫ್ ಆದರೆ ಇಂಡಿಗೋ (IndiGo) ವಿಮಾನ ಲ್ಯಾಂಡಿಂಗ್ ಆಗಿದೆ.
ಏರ್ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್ ಆಗುತ್ತಿತ್ತು. ಈ ಸಂದರ್ಭದಲ್ಲಿ ಇಂದೋರ್‌ನಿಂದ ಆಗಮಿಸಿದ ಇಂಡಿಗೋ ವಿಮಾನಕ್ಕೆ ತಪ್ಪಾಗಿ ರನ್‌ವೇಯಲ್ಲಿ ಲ್ಯಾಂಡಿಂಗ್ ಮಾಡಲು ಅನುಮತಿ ಸಿಕ್ಕಿದೆ.
Advertisement
#VIDEO | Narrow Escape For Passengers At Mumbai Airport As 2 Planes Land, Take-Off On Same Runway#Mumbai #Airport pic.twitter.com/hjnEmYe1CJ
— TIMES NOW (@TimesNow) June 9, 2024
ಅನುಮತಿ ಸಿಕ್ಕಿದ ಕಾರಣ ಪೈಲಟ್ ರನ್‌ವೇಯಲ್ಲಿ ಟಚ್‌ಡೌನ್ ಆಗುತ್ತಿದ್ದಾಗ ಏರ್ ಇಂಡಿಯಾ ಜಸ್ಟ್ ಟೇಕಾಫ್ ಆಗಿತ್ತು. ಒಂದು ವೇಳೆ ಏರ್ ಇಂಡಿಯಾ ಟೇಕಾಫ್ ಕೆಲ ಸೆಕೆಂಡ್ ವಿಳಂಬವಾಗಿದ್ದರೆ ಹಿಂದಿನಿಂದ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.
Advertisement
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್ ಮಾಡಲು ಅನುಮತಿ ನೀಡಿದ್ದ ಎಟಿಸಿ ಸಿಬ್ಬಂದಿಯನ್ನು ತನಿಖೆ ಮುಗಿಯುವರೆಗೂ ಕೆಲಸದಿಂದ ತೆಗೆಯಲಾಗಿದೆ.
Advertisement