ಮುಂಬೈ: ನಟಿ, ಮಾಡೆಲ್ ಅನುಷ್ಕಾ ರಂಜನ್ ಕಪೂರ್ ಅವರ ಸಂಗೀತ ಸಮಾರಂಭವು ನಿನ್ನೆ ರಾತ್ರಿ ನಡೆದಿದ್ದು, ಈ ಸಮಾರಂಭಕ್ಕೆ ಹಲವು ಬಾಲಿವುಡ್ ತಾರೆಯರು ಬಂದು ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲಿಯೂ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರ ಡ್ಯಾನ್ಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅನುಷ್ಕಾ ರಂಜನ್ ಕಪೂರ್ ಮದುವೆ ತಯಾರಿ ಬಹಳ ಅದ್ದೂರಿಯಲ್ಲಿ ನಡೆಯುತ್ತಿದ್ದು, ಈ ಹಿನ್ನೆಲೆ ನಿನ್ನೆ ಸಂಗೀತ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ ಗಳು ಸಹ ಭಾಗವಹಿಸಿದ್ದರು. ಅದರಲ್ಲಿಯೂ ಆಲಿಯಾ ಭಟ್, ವಾಣಿ ಕಪೂರ್ ಮತ್ತು ಆಥಿಯಾ ಶೆಟ್ಟಿ ಅವರು ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನ ಮಾನ್ವಿ ಪೊಲೀಸ್ ಠಾಣೆಗೆ 5ನೇ ರ‍್ಯಾಂಕ್ ಕೊಟ್ಟ ಕೇಂದ್ರ
ಈ ಸಮಾರಂಭಕ್ಕೆ ಅಲಿ ಗೋನಿ, ಕಿರ್ಸಲ್ ಡಿಸೋಜಾ ಮುಂತಾದ ಟಿವಿ ತಾರೆಗಳು ಉಪಸ್ಥಿತರಿದ್ದರು. ಪ್ರಸ್ತುತ ಅನುಷ್ಕಾ ಅವರ ಸಂಗೀತ ಸಮಾರಂಭದ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಆಲಿಯಾ ಭಟ್, ವಾಣಿ ಕಪೂರ್ ಮತ್ತು ಆಥಿಯಾ ಶೆಟ್ಟಿ ಹೃದಯತುಂಬಿ ನೃತ್ಯ ಮಾಡುವುದನ್ನು ಕಾಣಬಹುದು. ಈ ವೀಡಿಯೋದಲ್ಲಿ ನಟಿ ಮತ್ತು ಅನುಷ್ಕಾ ಸಹೋದರಿ ಆಕಾಂಕ್ಷ ರಂಜನ್ ಕಪೂರ್ ಅವರು ಕೂಡ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ.
View this post on Instagram
ಈ ವೀಡಿಯೋ ನೋಡಿದ ಆಲಿಯಾ ಅಭಿಮಾನಿಗಳು ತಮ್ಮ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡು ಸಂಭ್ರಮಿಸುತ್ತಿದ್ದಾರೆ.
ಆಲಿಯಾ ಭಟ್ ಸಂಜಯ್ ಲೀಲಾ ಬನ್ಸಾಲಿ ಅವರ ‘ಗಂಗೂಬಾಯಿ ಕಥಿವಾಡಿ’ ಮತ್ತು ಎಸ್‍ಎಸ್ ರಾಜಮೌಳಿ ಅವರ ”ಆರ್‌ಆರ್‌ಆರ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಅಲ್ಲದೇ ಅವರು ನಿರ್ಮಿಸುತ್ತಿರುವ ‘ಡಾರ್ಲಿಂಗ್ಸ್’ ನಲ್ಲಿಯೂ ನಟಿಸಲಿದ್ದಾರೆ.
ಆಲಿಯಾ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಫರ್ಹಾನ್ ಅಖ್ತರ್ ಆಕ್ಷನ್ ಕಟ್ ಹೇಳುತ್ತಿರುವ ‘ಜೀ ಲೇ ಜರಾ’ ಮತ್ತು ಕರಣ್ ಜೋಹರ್ ಅವರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಆಲಿಯಾಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಬೇರೆಯವರ ವ್ಯಾಕ್ಸಿನೇಷನ್ ಮಾಹಿತಿಯನ್ನೂ CoWIN ವೆಬ್‍ಸೈಟ್‍ನಲ್ಲಿ ಚೆಕ್ ಮಾಡಿ