ವಾಷಿಂಗ್ಟನ್: ಶಾಲೆಯ ಕೊನೆ ದಿನ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಸಂಭ್ರಮವಿರುತ್ತದೆ. ಹಾಗೆ ಇಲ್ಲೊಂದು ಶಾಲೆಯ ವಿದ್ಯಾರ್ಥಿಗಳು ಸಾವಿರಾರು ಕಾಗದಗಳನ್ನ ಎಸೆಯೋ ಮೂಲಕ ಶಾಲೆಯ ಕೊನೆಯ ದಿನದ ಸಂಭ್ರಮಾಚರಣೆಯನ್ನ ಮಾಡಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.
ಅರಿಝೋನಾದ ಚಾಂಡ್ಲರ್‍ನಲ್ಲಿರೋ ಬಾಶಾ ಹೈ ಸ್ಕೂಲ್‍ನ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ರೀತಿ ಸಂಭ್ರಮಾಚರಣೆ ಮಾಡಿದ್ದಾರೆ. ಪ್ರತಿವರ್ಷ ಶಾಲೆಯ ಕೊನೆಯ ದಿನದಂದು ವಿದ್ಯಾರ್ಥಿಗಳು ಎಷ್ಟು ಸಾಧ್ಯವೋ ಅಷ್ಟು ಪೇಪರ್‍ಗಳನ್ನ ಒಟ್ಟುಗೂಡಿಸಿ ಶಾಲೆಯ ಮೆಟ್ಟಿಲುಗಳ ಮೇಲೆ ಬೀಳುವಂತೆ ಎಸೆಯುತ್ತಾರೆ. ಅಷ್ಟೇ ಅಲ್ಲ, ರಾಶಿರಾಶಿಯಾಗಿ ಬಿದ್ದ ಪೇಪರ್‍ಗಳ ಮೇಲೆ ಜಾರು ಬಂಡಿ ಕೂಡ ಆಡ್ತಾರೆ.
Advertisement
ಇಷ್ಟೆಲ್ಲಾ ಮಾಡಿದ್ರೂ ಶಿಕ್ಷಕರು ಏನೂ ಕೇಳಲ್ವಾ ಅಂದ್ರಾ? ಇಲ್ಲ. ಇದನ್ನೆಲ್ಲಾ ಕೊನೆಯಲ್ಲಿ ವಿದ್ಯಾರ್ಥಿಗಳೇ ಸ್ವಚ್ಛ ಮಾಡೋದ್ರಿಂದ ಬೈಗುಳವಿಲ್ಲ. ಈ ವಿಶಿಷ್ಟ ಸಂಭ್ರಮಾಚರಣೆಯನ್ನ ಜಾರ್ಡನ್ ವೈಟ್ ಅನ್ನೋ ವಿದ್ಯಾರ್ಥಿಯೊಬ್ಬರು ವಿಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು ಇದೀಗ ಸಖತ್ ವೈರಲ್ ಆಗಿದೆ.
Advertisement
ವಿದ್ಯಾರ್ಥಿಗಳೆಲ್ಲರೂ 5..4…3..2..1… ಅಂತ ಕೌಂಟ್‍ಡೌನ್ ಮಾಡಿ ಕೊನೆಯಲ್ಲಿ ಚೀರುತ್ತಾ ಖುಷಿಯಿಂದ ಪೇಪರ್‍ಗಳನ್ನ ಎರಚಿದ್ದಾರೆ. ಸುಮಾರು ಒಂದೂವರೆ ನಿಮಿಷಗಳವರೆಗೆ ಪೇಪರ್‍ನ ಸುರಿಮಳೆಯೇ ಆಗುತ್ತದೆ. ಮೆಟ್ಟಿಲ ಮೇಲೆ ಬಿದ್ದ ಪೇಪರ್ ರಾಶಿಯ ಮೇಲೆ ವಿದ್ಯಾರ್ಥಿಗಳು ಜಾರಿಕೊಂಡು ಕೆಳಗೆ ಬಂದಿದ್ದಾರೆ. ಈ ವಿಡಿಯೋವನ್ನ ಮೇ 27ರಂದು ಅಪ್‍ಲೋಡ್ ಮಾಡಲಾಗಿದ್ದು ಈವರೆಗೆ 74 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 33 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
Advertisement
ಸಂಭ್ರಮಾಚರಣೆ ಮುಗಿದ ಬಳಿಕ ಈ ಪೇಪರ್‍ಗಳನ್ನ ರೀಸೈಕಲ್ ಮಾಡಲಾಗಿದೆ ಅಂತ ಜಾರ್ಡನ್ ವೈಟ್ ತಿಳಿಸಿದ್ದಾರೆ.
Advertisement
Bhs we out!!!!! pic.twitter.com/VBsCtwyyXS
— Jordan (@jordanwhite649) May 26, 2017