ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ತಾಯಿ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ.
ಸಲ್ಮಾನ್ ಖಾನ್ ತಮ್ಮ ತಾಯಿ ಸಲ್ಮಾ ಖಾನ್ ಅವರ ಜೊತೆಗಿನ ಮಧುರ ಕ್ಷಣದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ಸಲ್ಮಾನ್ ತನ್ನ ತಾಯಿ ಮಡಿಲಲ್ಲಿ ತಲೆಯನ್ನಿಟ್ಟುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗೆ ‘ತಾಯಿಯ ಮಡಿಲು ಸ್ವರ್ಗ’ ವೆಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುನಿಲ್ ಗ್ರೋವರ್ ಆರೋಗ್ಯ ವಿಚಾರಿಸಲು ತನ್ನ ವೈದ್ಯ ತಂಡಕ್ಕೆ ಸೂಚಿಸಿದ ಸಲ್ಮಾನ್
View this post on Instagram
ಸಲ್ಲು ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ಅಮ್ಮ – ಮಗನ ಜೋಡಿಯನ್ನ ಇಷ್ಟಪಟಿದ್ದಾರೆ. ‘ಮಗ ಎಂದರೆ ಇದೇ ರೀತಿ ಇರಬೇಕು’ ಎಂದು ಕಮೆಂಟ್ ಮಾಡುತ್ತಿದ್ದಾರೆ. ‘ಇಬ್ಬರು ಸ್ಪಷಲ್ ವ್ಯಕ್ತಿಗಳು ಒಂದೇ ಫೋಟೋದಲ್ಲಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಮತ್ತು ಅವರ ಮೊದಲ ಪತ್ನಿ ಸಲ್ಮಾ ಖಾನ್ ಅವರಿಗೆ ಡಿಸೆಂಬರ್ 27 1965 ರಂದು ಸಲ್ಲು ಜನಿಸಿದರು. ಅವರು 1988 ರಲ್ಲಿ ‘ಬಿವಿ ಹೋ ತೋ ಐಸಿ’ ಸಿನಿಮಾ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ್ದು, ಮೂರು ದಶಕಗಳಿಂದ ಹಿಂದಿ ಸಿನಿರಂಗದಲ್ಲಿದ್ದಾರೆ.
ಸಲ್ಮಾನ್ ಖಾನ್ ಕೊನೆಯದಾಗಿ ‘ಅಂತಿಮ್: ದಿ ಫೈನಲ್ ಟ್ರುತ್’ ಸಿನಿಮಾದಲ್ಲಿ ತನ್ನ ಸೋದರ ಮಾವ ಆಯುಷ್ ಶರ್ಮಾ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಸಲ್ಲು ಪೊಲೀಸ್ ಪಾತ್ರದಲ್ಲಿ ಮಿಂಚಿದ್ದು, ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನೂ ಓದಿ: ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್
ಪ್ರಸ್ತುತ ಸಲ್ಲು, ಕತ್ರಿನಾ ಕೈಫ್ ಜೊತೆ ‘ಟೈಗರ್ 3’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ಮತ್ತೊಬ್ಬ ಸ್ಟಾರ್ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಾರುಖ್ ಖಾನ್ ‘ಪಠಾಣ್’ ಸಿನಿಮಾದಲ್ಲಿ ಸಲ್ಲು ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಲು ‘ಕಭಿ ಈದ್ ಕಭಿ’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಸಲ್ಲುಗೆ ಜೋಡಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ.