ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ‘ರಣವಿಕ್ರಮ’ ಚಿತ್ರದಲ್ಲಿ ನಟಸಿದ ನಟಿ ಅದಾ ಶರ್ಮಾ ಇಂದು ತರಕಾರಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ!
ನಟಿ ಅದಾ ಶರ್ಮಾ ತರಕಾರಿ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಾ ಶರ್ಮಾ ಅವರ ಈ ಫೋಟೋ ನೋಡಿ ಅಭಿಮಾನಿಗಳು ಕೂಡ ದಂಗಾಗಿದ್ದಾರೆ. ಅದಾ ಶರ್ಮಾ ಅವರನ್ನು ಈ ಫೋಟೋದಲ್ಲಿ ಕಂಡು ಹಿಡಿಯುವುದು ಅಭಿಮಾನಿಗಳಿಗೆ ಸ್ವಲ್ಪ ಕಷ್ಟವಾಗಿದೆ.
Advertisement
Advertisement
ಫೋಟೋದಲ್ಲಿ ಅದಾ ಶರ್ಮಾ ಹಳೆಯ ಸೀರೆ ಹಾಕಿ ತರಕಾರಿ ಮಾರುತ್ತಿದ್ದಾರೆ. ತರಕಾರಿ ಮಾರುವವರ ರೀತಿಯಲ್ಲೇ ಅದಾ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿದೆ.
Advertisement
ಶೀಘ್ರದಲ್ಲೇ ಅದಾ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಚಿತ್ರಕ್ಕಾಗಿ ಅದಾ ಲುಕ್ ಟೆಸ್ಟ್ ಮಾಡುವ ಸಲುವಾಗಿ ತರಕಾರಿ ಮಾರುವ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅದಾ ಮುಗ್ಧ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.
Advertisement
ಅದಾ 2008ರಲ್ಲಿ ‘1920’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ನಂತರ ಕಳೆದ ವರ್ಷ ‘ಕಮಾಂಡೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 10 ವರ್ಷದ ಬಾಲಿವುಡ್ ಸಿನಿಮಾ ಬದುಕಿನಲ್ಲಿ ಅದಾ ಕೇವಲ 5 ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಹಾಗೂ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಅದಾ ಕೆಲ ದಿನಗಳ ಹಿಂದೆ ತಮ್ಮ ಕೂದಲಿಗೆ ಹೊಸ ಲುಕ್ ಕೂಡ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv