ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.
ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.
Advertisement
Advertisement
ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]