FACT CHECK- ಫೋಟೋ ಹಿಂದಿನ ಅಸಲಿ ಸತ್ಯ ಬಯಲು

Public TV
1 Min Read
viral photo 01

ಳೆದ ಕೆಲ ದಿನಗಳಿಂದ ಮಹಿಳಾ ಪೊಲೀಸ್ ಪೇದೆ ಪರೋಕ್ಷವಾಗಿ ಪೌರತ್ವ ಕಾಯ್ದೆ (ಸಿಎಎ) ಪರವಾಗಿ ಭಿತ್ತಿ ಪತ್ರ ಹಿಡಿದಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವರು ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಬಹುತೇಕರು ಈ ಫೋಟೋವನ್ನು ತಮ್ಮ ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸುತ್ತಿದ್ದಾರೆ.

ನಕಲಿ ಫೋಟೋದಲ್ಲಿ ಏನಿದೆ?: ಜನಸಂದಣಿಯಲ್ಲಿ ಮಹಿಳಾ ಪೇದೆಯೊಬ್ಬರು ಭಿತ್ತಿ ಪತ್ರವೊಂದನ್ನು ತೋರಿಸುತ್ತಿದ್ದಾರೆ. ಎಡಿಟ್ ಮಾಡಲಾಗಿರುವ ಫೋಟೋದಲ್ಲಿ, “ಇಂದು ಅಕ್ರಮ ವಲಸಿಗರನ್ನೇ ಓಡಿಸಲೊಪ್ಪದ ಆ ಪಕ್ಷ, ಅಂದು ಬ್ರಿಟಿಷರನ್ನು ಓಡಿಸಿತ್ತು ಎಂದರೆ ನಂಬಬಹುದೇ?!!!” ಎಂದು ಬರೆಯಲಾಗಿದೆ.

ಫೋಟೋ ಅಸಲಿ ಕಹಾನಿ: ನವೆಂಬರ್ ನಲ್ಲಿ ದೆಹಲಿ ಪೊಲೀಸರು ಮತ್ತು ವಕೀಲರ ನಡುವೆ ಸಂಘರ್ಷ ಉಂಟಾಗಿತ್ತು. ಅಂದು ದೆಹಲಿಯ ವಕೀಲರು ರಸ್ತೆಗಿಳಿದು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇತ್ತ ಪೊಲೀಸರು ಸಹ ಶಾಂತಿಯುತವಾಗಿ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಇದೇ ಮಹಿಳಾ ಪೊಲೀಸ್ ಪೇದೆ, ದೆಹಲಿ ಹೈಕೋರ್ಟ್ ಆವರಣದಲ್ಲಿ ಪೊಲೀಸರ ಮೇಲಿನ ಹಲ್ಲೆ ಖಂಡಿಸಿ ಭಿತ್ತಿ ಪತ್ರ ಹಿಡಿದಿದ್ದರು.

ಇಂದು ಅದೇ ಫೋಟೋವನ್ನು ಎಡಿಟ್ ಮಾಡಲಾಗಿದ್ದು, ಭಿತ್ತಿ ಪತ್ರದಲ್ಲಿಯ ಸಾಲುಗಳನ್ನು ಬದಲಾಯಿಸಲಾಗಿದೆ. ಫೋಟೋದ ಸತ್ಯವನ್ನು ಅರಿಯದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನವೆಂಬರ್ 5ರಂದು ಈ ಫೋಟೋ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು.

delhi police5

 

ಏನಿದು ಗಲಾಟೆ: ನವೆಂಬರ್ 2, 2019ರಂದು ದೆಹಲಿಯ ಸಾಕೇತ್ ಕೋರ್ಟ್ ಆವರಣದಲ್ಲಿ ಪೊಲೀಸರು ಮತ್ತು ವಕೀಲರ ಮಧ್ಯೆ ಸಂಘರ್ಷ ಉಂಟಾಗಿತ್ತು. ಈ ಗಲಾಟೆಯಲ್ಲಿ ಪೊಲೀಸರ ಗುಂಡೇಟಿಗೆ ಓರ್ವ ವಕೀಲ ಗಾಯಗೊಂಡಿದ್ದರು. ಪೊಲೀಸರ ನಡೆಯನ್ನು ಖಂಡಿಸಿ ದೆಹಲಿ ಪೊಲೀಸರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ತದನಂತರ ವಕೀಲರ ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಥಳಿಸಿರುವ ವಿಡಿಯೋ ವೈರಲ್ ಆಗಿತ್ತು. ಇತ್ತ ದೆಹಲಿ ಪೊಲೀಸರು ‘ನಮಗೆ ರಕ್ಷಣೆ ಕೊಡಿ, ನಾವು ಕೂಡ ಮನುಷ್ಯರು’ ಎಂದು ಭಿತ್ತಿ ಪತ್ರಗಳನ್ನು ಹಿಡಿದು ಪ್ರತಿಭಟಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *