ತಿರುವನಂತಪುರ: 2024ರ ಮಹಾಕುಂಭಮೇಳದಲ್ಲಿ (Maha Kumbh Mela) ರುದ್ರಾಕ್ಷಿ ಮಾರುತ್ತ ತನ್ನ ಸುಂದರ ಕಣ್ಣುಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಬೋಂಸ್ಲೆ (Monalisa Bhosle) ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಲಯಾಳಂ ಚಿತ್ರದ ಚಿತ್ರೀಕರಣಕ್ಕಾಗಿ ತಿರುವನಂತಪುರದಲ್ಲಿರುವ ಮೊನಾಲಿಸಾ, ಥಂಪನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ರೊಮ್ಯಾಂಟಿಕ್ ಸಾಂಗ್‌ನಲ್ಲಿ ಕುಂಭಮೇಳದ ನೀಲಿ ಕಂಗಳ ಚೆಲುವೆ – ದಿಲ್ ಕದ್ದ ಮೊನಾಲಿಸಾ!
ಮೊನಾಲಿಸಾ ಬೆಳಗ್ಗೆ ತನ್ನ ಗೆಳೆಯನೊಂದಿಗೆ ಠಾಣೆಗೆ ಬಂದು ತನ್ನ ತಂದೆ ವಿಜಯ್ ಸಿಂಗ್ ಭೋಸ್ಲೆ ವಿರುದ್ಧ ದೂರು ನೀಡಿದ್ದಾರೆ. ತಂದೆ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ಯಾವುದೇ ದೈಹಿಕ ಕಿರುಕುಳ ನಡೆದಿಲ್ಲ. ಪ್ರಾಥಮಿಕವಾಗಿ ಬಲವಂತದ ವಿವಾಹ ಪ್ರಸ್ತಾಪವಾಗಿದೆ. ಮೊನಾಲಿಸಾ ತಂದೆ ತನ್ನ ಮೇಲೆ ಒತ್ತಡ ಹೇರುತ್ತಲೇ ಇದ್ದುದರಿಂದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಇನ್ನೂ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ತಂದೆಯೊಂದಿಗೆ ತಿರುವನಂತಪುರಂಗೆ ಬಂದಿದ್ದ ಮೊನಾಲಿಸಾ, ಪ್ರಸ್ತುತ ಚಲನಚಿತ್ರ ಚಿತ್ರೀಕರಣಕ್ಕಾಗಿ ಪೂವಾರ್‌ನಲ್ಲಿದ್ದಾರೆ. ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡು ಗಮನ ಸೆಳೆದ ನಂತರ, ಮೊನಾಲಿಸಾಗೆ ಹೆಚ್ಚೆಚ್ಚು ಸಿನಿಮಾ ಆಫರ್‌ಗಳು ಬರುತ್ತಿವೆ. ಚಲನಚಿತ್ರ ನಿರ್ಮಾಪಕ ಸರೋಜ್ ಮಿಶ್ರಾ ಅವರಿಂದ ಮೊದಲ ಸಿನಿಮಾ ಆಫರ್ ಸಿಕ್ಕಿತ್ತು. ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ಮೊನಾಲಿಸಾಗೆ ಒಂದು ಪಾತ್ರವನ್ನು ನೀಡಿದ್ದರು. ಆದಾಗ್ಯೂ, ನಂತರ ಮತ್ತೊಬ್ಬ ನಟಿ ಮಿಶ್ರಾ ವಿರುದ್ಧ ಅನೇಕ ದೂರುಗಳನ್ನು ಸಲ್ಲಿಸಿದ್ದರು. ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿತ್ತು. ಇದನ್ನೂ ಓದಿ: ನಟಿ ಮಾಡೋದಾಗಿ ಹೇಳಿ ರೇಪ್ – ಮೊನಾಲಿಸಾಗೆ ಅವಕಾಶ ನೀಡಿದ್ದ ನಿರ್ದೇಶಕ ಅರೆಸ್ಟ್
ಬಳಿಕ ಮೊನಾಲಿಸಾ ಪಿ ಬಿನು ವರ್ಗೀಸ್ ನಿರ್ದೇಶನದ ಮತ್ತು ಜೀಲಿ ಜಾರ್ಜ್ ನಿರ್ಮಿಸಿದ ‘ನಾಗಮ್ಮ’ ಮಲಯಾಳಂ ಚಿತ್ರದಲ್ಲಿ ನಟಿಸಿದರು.

