ಕೊಡಗಿನಲ್ಲಿ ನಿರಂತರ ಗಾಳಿ ಮಳೆಯಿಂದ ಹರಡುತ್ತಿದೆ ವೈರಲ್ ಫೀವರ್‌ – ಒಂದೇ ತಿಂಗಳಲ್ಲಿ 3,000 ಕೇಸ್‌

Public TV
1 Min Read
Kodagu Viral Fever 2

ಮಡಿಕೇರಿ: ಕೊಡಗಿನಲ್ಲಿ ನಿರಂತರ ಗಾಳಿ ಮಳೆಯಿಂದಾಗಿ (Rain) ಜನರಲ್ಲಿ ವೈರಲ್‌ ಫೀವರ್‌ (Viral Fever) ಹೆಚ್ಚಾಗಿ ಹರಡುತ್ತಿದೆ. ಕಳೆದ ಒಂದೇ ತಿಂಗಳಲ್ಲಿ 3,000 ಶೀತಜ್ವರ ಪ್ರಕರಣಗಳು ದಾಖಲಾಗಿವೆ.

Kodagu Viral Fever

ಮೇ ತಿಂಗಳಲ್ಲಿ ಕೊಡಗಿನಲ್ಲಿ (Kodagu) ನಿರಂತರವಾಗಿ ಅಬ್ಬರಿಸಿದ್ದ ಮಳೆರಾಯ ಕೊಂಚ ಬಿಡುವು ನೀಡಿದ್ದ. ಕಳೆದ ಎರಡು ದಿನಗಳಿಂದ ಮತ್ತೆ ಧಾರಾಕಾರ ಮಳೆಯಾಗುತ್ತಿದೆ. ಅಚ್ಚರಿಯೆಂದರೆ ಈ ವರ್ಷ ಮಳೆಯೊಂದಿಗೆ ಶೀತಗಾಳಿಯೂ (Cold Wind) ಹೆಚ್ಚಾಗಿರುವುದರಿಂದ ಜನರಿಗೆ ವೈರಲ್‌ ಫೀವರ್‌ ಹರಡುತ್ತಿದೆ. ಮಳೆ, ಶೀತಗಾಳಿ ಪರಿಣಾಮ ಶೀತಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್‌

Kodagu Viral Fever 4

ಜಿಲ್ಲೆಯಾದ್ಯಂತ ಕಳೆದ ಏಪ್ರಿಲ್‌ನಲ್ಲಿ 15,000 ಶೀತಜ್ವರ ಪ್ರಕರಣಗಳು ದಾಖಲಾಗಿತ್ತು. ಆದ್ರೆ ಆಗಸ್ಟ್‌ ತಿಂಗಳಲ್ಲಿ 3,000 ಜ್ವರ ಪ್ರಕರಣಗಳು ದಾಖಲಾಗಿದೆ. ಕಳೆದ 3 ತಿಂಗಳಿಗೆ ಹೋಲಿಸಿದ್ರೆ ಈ ತಿಂಗಳಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಗೈಡ್‌ಲೈನ್ಸ್‌ ಜಾರಿ – ಮಾರ್ಗಸೂಚಿ ಏನು?

Kodagu Viral Fever 3

ಮಕ್ಕಳಲು ಆರೋಗ್ಯ ಸಮಸ್ಯೆ:
ಮಳೆಗಾಲ ಬಂತೆಂದರೆ ಕೊಡಗು ಜಿಲ್ಲೆಯಲ್ಲಿ ಓಡಾಡೋದೇ ಕಷ್ಟ. ಸದಾ ರಸ್ತೆಯಲ್ಲಿ ನೀರು ನಿಂತಂತಿರುತ್ತದೆ. ಇನ್ನು ಮಣ್ಣು ರಸ್ತೆಗಳ ಸ್ಥಿತಿಯಂತೂ ಕೇಳೋಹಾಗೇ ಇಲ್ಲ. ಆದ್ರೆ ಶೀತಗಾಳಿ ಕಡಿಮೆ ಇರುತ್ತಿದ್ದ ಪರಿಣಾಮ ಆರೋಗ್ಯ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಕಡಿಮೆಯಿರುತ್ತು. ಆದ್ರೆ ಈ ಬಾರಿ ಮಕ್ಕಳು, ವಿದ್ಯಾರ್ಥಿಗಳು ಕೂಡ ಆರೋಗ್ಯ ಸಮಸ್ತೆಗೆ ಗುತ್ತಾಗುತ್ತಿದ್ದಾರೆ. ಹೀಗಾಗಿ ಜನರು ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಯಾವಾಗಲು ಬೇರೆ ಧರ್ಮದ ಪರವಾಗಿ ಇದ್ದೇವೆ ಅಂತ ತೋರಿಸುತ್ತದೆ: ನಿಖಿಲ್ ಕುಮಾರಸ್ವಾಮಿ

Share This Article