ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಫಾಸ್ಟ್‌ಟ್ಯಾಗ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಖಾತೆಯಿಂದ ಹಣವನ್ನು ವಂಚನೆ ಮಾಡಲಾಗುತ್ತದೆ ಎಂಬ ಸಂದೇಶವಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವೀಡಿಯೋ ಫೇಕ್ ಆಗಿದ್ದು ಈ ರೀತಿಯ ಯಾವುದೇ ವಂಚನೆ ಆಗುವುದಿಲ್ಲ ಎಂದು FASTag NETC ತಿಳಿಸಿದೆ.
https://twitter.com/Bikash63/status/1540285101598134273
Advertisement
ವೀಡಿಯೋದಲ್ಲಿ ಏನಿದೆ?
ಕಾರು ಸ್ವಚ್ಛ ಮಾಡುವ ನೆಪದಲ್ಲಿ ಬಾಲಕನೊಬ್ಬ ಮುಂದುಗಡೆಯ ಗ್ಲಾಸ್ ಕ್ಲೀನ್ ಮಾಡುತ್ತಿರುತ್ತಾನೆ. ಫಾಸ್ಟ್ ಟ್ಯಾಗ್ ಇರುವ ಜಾಗದಲ್ಲಿ ತನ್ನ ಬಲಕೈಯಲ್ಲಿರುವ ವಾಚ್ ಅನ್ನು ತಂದು ಸ್ಕ್ಯಾನ್ ಮಾಡುತ್ತಾನೆ. ಕೂಡಲೇ ಈ ಫಾಸ್ಟ್ ಟ್ಯಾಗ್ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತದೆ ಎಂದು ಕಾರಿನಲ್ಲಿರುವ ವ್ಯಕ್ತಿ ಹೇಳುತ್ತಾನೆ.
Advertisement
Hi, NETC FASTag transaction can only be initiated by the registered merchants (Toll & Parking Plaza operators) which are onboarded by NPCI only from the respective geo-locations. No unauthorized device can initiate any financial transactions on NETC FASTag. It is absolutely safe.
— FASTag NETC (@FASTag_NETC) June 24, 2022
Advertisement
ಸರ್ಕಾರ ಹೇಳಿದ್ದು ಏನು?
ಆಯಾ ಭೌಗೋಳಿಕ ಸ್ಥಳಗಳಿಂದ ಮಾತ್ರ NPCI ಯಿಂದ ನೋಂದಾಯಿತರಾದವರು (ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ನಿರ್ವಾಹಕರು) ಮಾತ್ರ ಫಾಸ್ಟ್‌ಟ್ಯಾಗ್ ವಹಿವಾಟು ನಡೆಸುತ್ತಾರೆ. ಯಾವುದೇ ಅನಧಿಕೃತ ಸಾಧನ ಬಳಸಿ FASTag ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳ ನಡೆಸಲು ಸಾಧ್ಯವಿಲ್ಲ ಎಂದು NETC FASTag ಸ್ಪಷ್ಟಪಡಿಸಿದೆ.
Advertisement
FASTag ನಲ್ಲಿ RFID( ರೇಡಿಯೋ ತರಂಗಾಂತರ ಗುರುತಿಸುವಿಕೆ ಅಥವಾ Radio-frequency identification) ಇರುತ್ತದೆ. ಬ್ಯಾಂಕ್‌ನಲ್ಲಿ ವಾಹನದ ನೋಂದಣಿ ಸಂಖ್ಯೆ ಮತ್ತು ಪ್ರತ್ಯೇಕ ಯುಪಿಐ ಐಡಿ ಇರುತ್ತದೆ.