– ದೊಡ್ಡವರ ಮಕ್ಕಳು ತಪ್ಪು ಮಾಡಿದ್ರೂ ಶಿಕ್ಷೆ ಇಲ್ವಾ?
ಬೆಂಗಳೂರು: ದೊಡ್ಡವರ ಮಕ್ಕಳು ಏನು ಮಾಡಿದರೂ ನಡೆಯುತ್ತೆ. ಕಾನೂನು ನಿಯಮಗಳು ಇವರಿಗೆ ಲೆಕ್ಕಕ್ಕೇ ಇಲ್ಲವಂತಾಗಿದೆ. ಹೋಳಿ ಹಬ್ಬದಂದು ಅಪಘಾತ ಮಾಡಿ ಹಲ್ಲೆ ನಡೆಸಿದ ಸಚಿವರು, ಶಾಸಕರ ಮಕ್ಕಳು ಮತ್ತು ಸಂಬಂಧಿಕರ ಮೇಲೆ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ವಿಐಪಿ ಮಕ್ಕಳಾದ ಸಂತೋಷ್ ಭೈರತಿ ಹೋಳಿ ಹಬ್ಬದ ದಿನ ಅಪಘಾತ ಮಾಡಿ ಗಲಾಟೆ ಮಾಡಿದ್ದ. ಅಲ್ಲದೇ ಅಪಘಾತ ಆದಾಗ ಎಲ್ಲರನ್ನೂ ಅಟ್ಟಾಡಿಸಿ ಹೊಡೆಯಲು ಯತ್ನಿಸಿದ್ದ. ಜೊತೆಗೆ ಮಹೀಂದ್ರ ಎಕ್ಸ್‌ಯುವಿ ಕಾರಿನಲ್ಲಿದ್ದ ಯುವಕನಿಗೆ ಸಂತೋಷ್ ಭೈರತಿ ಹಲ್ಲೆ ನಡೆಸಿದ್ದ.
ಏನಿದು ಪ್ರಕರಣ?
ಹೋಳಿಯಬ್ಬದ ದಿನ ಚಾಲುಕ್ಯ ಸರ್ಕಲ್‍ನಲ್ಲಿ ಎರಡು ಕಾರ್‌ಗಳ ನಡುವೆ ಡಿಕ್ಕಿಯಾಗಿ ಗಲಾಟೆಯಾಗಿತ್ತು. ಅಂದು ರಸ್ತೆಯಲ್ಲಿ ಕಾರ್ ನಿಲ್ಲಿಸಿಕೊಂಡು ದೊಡ್ಡವರ ಮಕ್ಕಳು ಟ್ರಾಫಿಕ್ ಜಾಮ್ ಮಾಡಿದ್ದರು. ಇವರ ಗಲಾಟೆ, ಪುಂಡಾಟದ ದೃಶ್ಯಗಳನ್ನ ಸಾರ್ವಜನಿಕರು ಸೆರೆ ಹಿಡಿದಿದ್ದರು. ಆ ವಿಡಿಯೋಗಳು ವಾಟ್ಸಪ್‍ಗಳು ಹರಿದಾಡುತ್ತಿವೆ.
ಸ್ವಯಂಪ್ರೇರಿತ ಕೇಸ್ ದಾಖಲು ಮಾಡಿ ಬುದ್ಧಿ ಕಲಿಸಬೇಕಾದ ಪೊಲೀಸರೇ ಗಪ್ ಚುಪ್ ಆಗಿದ್ದಾರೆ. ದೊಡ್ಡವರ ಮಕ್ಕಳ ಸಹವಾಸ ಯಾಕಪ್ಪಾ ಬೇಕು ಅಂತ ಗಲಾಟೆ ನೋಡಿ ಪೊಲೀಸರು ಸುಮ್ಮನಾಗಿದ್ದಾರೆ. ರಸ್ತೆಯಲ್ಲಿ ಗಲಾಟೆ, ಅಪಘಾತ ಮಾಡಿ ರಂಪಾಟ ಮಾಡಿದರೂ ಪೊಲೀಸರ ಕ್ರಮ ಕೈಗೊಳ್ಳದೇ ಇರುವುದು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ.