ಚಿಕ್ಕಬಳ್ಳಾಪುರ: ಪುರಸಭೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಎಸಿಪಿ ದರ್ಪ ತೋರಿದ್ದಾರೆ.
ದೇವನಹಳ್ಳಿ ಎಸಿಪಿ ಮುರುಳಿಧರ್ ದರ್ಪ ತೋರಿದವರಾಗಿದ್ದು, ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮುರುಳಿಧರ್ ಅವರು ದೇವನಹಳ್ಳಿ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಮಾಧ್ಯಮ ಮಾಹಿತಿ ಕೇಂದ್ರದಲ್ಲಿ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದ ವರದಿಗಾರರನ್ನು ತಳ್ಳಿ ಎಸಿಪಿ ದರ್ಪ ಮೆರೆದಿದ್ದಾರೆ. ವರದಿ ಮಾಡಲು ಬಂದಿದ್ದ ಮಾಧ್ಯಮ ವರದಿಗಾರರನ್ನು ಬಂಧಿಸಿ ಜೈಲುಗಟ್ಟಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ.
ಅಲ್ಲದೆ ಚುನಾವಣಾಧಿಕಾರಿಗಳೇ ಮಾಧ್ಯಮ ಮಾಹಿತಿ ಕೇಂದ್ರ ತೆರೆದಿದ್ದರೂ ಎಣಿಕೆ ಕೇಂದ್ರದಿಂದ ಹೊರಹೋಗಿ ಎಂದು ದೌರ್ಜನ್ಯ ನಡೆಸಿದ್ದಾರೆ. ಜನ ಪ್ರತಿನಿಧಿಗಳು ಮತ್ತು ಮುಖಂಡರನ್ನು ತಡೆಯಲಾಗದೆ ಎಸಿಪಿ ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ.