ಟೆಹ್ರಾನ್: ಇರಾನ್‌ನಲ್ಲಿ (Iran) ಮಹಿಳೆಯರಿಗೆ ಕಡ್ಡಾಯವಾದ ಹಿಜಬ್ (Hijab) ಒಳಗೊಂಡ ಡ್ರೆಸ್ ಕೋಡ್ (Dress Code) ಅನ್ನು ಅನುಸರಿಸಲು ವಿಫಲರಾಗಿದ್ದಕ್ಕೆ 12 ನಟಿಯರನ್ನು ನಟನೆಯ ವೃತ್ತಿಯಿಂದ ನಿಷೇಧಿಸಿರುವುದಾಗಿ ಇರಾನ್‌ನ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಕಾನೂನನ್ನು ಅನುಸರಿಸದವರಿಗೆ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಇರಾನ್‌ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವ ಮೊಹಮ್ಮದ್ ಮೆಹದಿ ಎಸ್ಮಾಯಿಲಿ ತಿಳಿಸಿದ್ದಾರೆ.
Advertisement
Advertisement
ಇರಾನ್‌ನ ನಟಿಯರಾದ ತರನೆಹ್ ಅಲಿದೋಸ್ತಿ, ಕಟಾಯೂನ್ ರಿಯಾಹಿ, ಫತೇಮೆ ಮೊಟಮೆಡ್ ಅರಿಯಾ ಸೇರಿದಂತೆ 12 ನಟಿಯರು ಹಿಜಬ್ ಕಾನೂನನ್ನು ಉಲ್ಲಂಘಿಸುತ್ತಿದ್ದು, ಅವರಿಗೆ ಇನ್ನುಮುಂದೆ ಚಲನಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಲು ಅನುಮತಿಸಲಾಗುವುದಿಲ್ಲ ಎಂದು ಮಂಗಳವಾರ ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
Advertisement
ಕಳೆದ ವರ್ಷ ಇರಾನ್‌ನಲ್ಲಿ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತಳಾಗಿದ್ದ 22 ವರ್ಷದ ಕುರ್ದ್ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವಾಗಿತ್ತು. ಬಳಿಕ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಸಂದರ್ಭ ಬಂಧಿಸಲ್ಪಟ್ಟಿದ್ದ ಸಾರ್ವಜನಿಕ ವ್ಯಕ್ತಿಗಳಲ್ಲಿ ಅಲಿದೂಸ್ತಿ ಮತ್ತು ರಿಯಾಹಿ ಕೂಡಾ ಸೇರಿದ್ದರು.
Advertisement
ಇರಾನ್‌ನ ಮಹಿಳೆಯರ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದ ಆರೋಪದ ಮೇಲೆ ಮಹ್ಸಾ ಅಮಿನಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆಕೆಯ ಸಾವಾಗಿತ್ತು. ಈ ಹಿನ್ನೆಲೆ ಮಹಿಳೆಯರ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಅನ್ನು ವಿರೋಧಿಸಿ ತಿಂಗಳುಗಳವರೆಗೆ ದೇಶಾದ್ಯಂತ ಭಾರೀ ಪ್ರತಿಭಟನೆ, ಗಲಭೆಗಳು ನಡೆದಿತ್ತು. ಇದನ್ನೂ ಓದಿ: ಹುಲಿ ಉಗುರಿನ ಸಂಕಷ್ಟ- ದರ್ಶನ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ
ಇರಾನ್‌ನ 1979ರ ಇಸ್ಲಾಮಿಕ್ ಕ್ರಾಂತಿಯ ನಂತರ 1983 ರಿಂದ ಕುತ್ತಿಗೆ ಮತ್ತು ತಲೆಯನ್ನು ಮುಚ್ಚುವ ವಸ್ತ್ರವನ್ನು ಧರಿಸುವುದು ಮಹಿಳೆಯರಿಗೆ ಕಡ್ಡಾಯವಾಗಿದೆ. ಆದರೆ ಕಳೆದ ವರ್ಷದ ಈ ಸಾಮೂಹಿಕ ಪ್ರತಿಭಟನೆಗಳ ನಂತರ ಇರಾನ್‌ನಲ್ಲಿ ಮಹಿಳೆಯರು ಹಿಜಬ್ ಸೇರಿದಂತೆ ಡ್ರೆಸ್ ಕೋಡ್ ಅನ್ನು ಹೆಚ್ಚಾಗಿ ಉಲ್ಲಂಘಿಸುತ್ತಿದ್ದಾರೆ.
ಹಿಜಬ್ ನಿಯಮಗಳನ್ನು ಉಲ್ಲಂಘಿಸುವ ಮಹಿಳೆಯರ ವಿರುದ್ಧ ಇರಾನ್ ಕಳೆದ ಕೆಲವು ತಿಂಗಳುಗಳಿಂದ ಕ್ರಮಗಳನ್ನು ಹೆಚ್ಚಿಸಿದೆ. ಸೆಪ್ಟೆಂಬರ್‌ನಲ್ಲಿ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸುವ ಮಹಿಳೆಯರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡವನ್ನು ಹೆಚ್ಚಿಸುವ ಪರವಾಗಿ ಶಾಸಕರು ಮತ ಹಾಕಿದ್ದಾರೆ. ಇದನ್ನೂ ಓದಿ: 4 ಕೋಟಿ ಮೊತ್ತದ ಲ್ಯಾಂಬೊರ್ಗೀನಿ ಕಾರು ಖರೀದಿಸಿದ ಶ್ರದ್ಧಾ ಕಪೂರ್
Web Stories