ಲೀಲಾವತಿ (Leelavathi) ಅವರ ನಿಧನದ ನೋವಿನಲ್ಲಿರೋ ವಿನೋದ್ ರಾಜ್ (Vinod Raj) ಅವರು ತಾಯಿಯ ಕೊನೆಯ ಕನಸು, ಮಗನ ವಿದ್ಯಾಬ್ಯಾಸದ ಬಗ್ಗೆ ಮೌನ ಮುರಿದಿದ್ದಾರೆ. ಮಗ ಯುವರಾಜ್‌ನನ್ನು ಯಾಕೆ ಇಷ್ಟು ವರ್ಷಗಳ ಕಾಲ ಕ್ಯಾಮೆರಾ ಕಣ್ಣಿಂದ ದೂರವಿಟ್ಟರು ಎಂಬುದನ್ನ ಮುಕ್ತವಾಗಿ ವಿನೋದ್ ಮಾತನಾಡಿದ್ದಾರೆ. ಇದನ್ನೂ ಓದಿ:ಕಳಪೆ ಎಂದು ಜೈಲಿಗಟ್ಟಿದ ವಿನಯ್ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್

ಬಳಿಕ ಮಗ ಯುವರಾಜ್ (Yuvaraj) ಬಗ್ಗೆ ಪ್ರತಿಕ್ರಿಯಿಸಿ, ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್‌ಗೂ ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ. ಚೆನ್ನೈಯಲ್ಲಿದ್ರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಮಣ್ಣಲ್ಲಿ ಮಣ್ಣಾದ ಮಹಾನ್ ನಟಿ ಲೀಲಾವತಿ: ‘ಸ್ವಾಭಿಮಾನಿ ನಲ್ಲೆ’ಗೆ ಕಣ್ಣೀರಿನ ವಿದಾಯ
ಇಲ್ಲಿದ್ದಾಗ ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಮದ್ರಾಸ್‌ನಲ್ಲಿಟ್ಟರು. ಮಗನ ವಿದ್ಯಾಬ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ ಎಂದು ವಿನೋದ್ ರಾಜ್ ಮಾತನಾಡಿದ್ದಾರೆ.
ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.


