ಅಪ್ಪ, ಚಿಕ್ಕಪ್ಪನ ಜೊತೆ ವಿನೀಶ್ ಸಂಕ್ರಾಂತಿ ವೈಬ್ಸ್

Public TV
1 Min Read
vinish darshan 1

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಕುಟುಂಬದಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಇದೀಗ ಖುಷಿಯಲ್ಲಿ ಚಿಕ್ಕಪ್ಪ ದಿನಕರ್ (Dinakar) ಹಾಗೂ ಅಪ್ಪನ ಜೊತೆ ವಿನೀಶ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಖುಷಿಯ ಕ್ಷಣಗಳ ಫೋಟೋಗಳನ್ನು ದರ್ಶನ್ ಪುತ್ರ ಇನ್ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಯುವರಾಜ್‌ಕುಮಾರ್‌ಗೆ ಜೊತೆಯಾದ ‘ಸಲಗ’ ಖ್ಯಾತಿಯ ಸಂಜನಾ ಆನಂದ್

vinish

ಪ್ರತಿ ವರ್ಷವೂ ದರ್ಶನ್ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ. ಅದರಂತೆ ಮೈಸೂರಿನಲ್ಲಿರುವ ಫಾರಂ ಹೌಸ್‌ನಲ್ಲಿ ದರ್ಶನ್ ಹಾಗೂ ದಿನಕರ್ ಜೊತೆ ವಿನೀಶ್ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಕೋರ್ಟ್ ಟೆನ್ಶನ್ ನಡುವೆ ದರ್ಶನ್ ಹಬ್ಬದ ಸೆಲೆಬ್ರೇಷನ್‌ನಲ್ಲಿ ಭಾಗಿಯಾಗಿದ್ದಾರೆ. ಅಪ್ಪ ಹಾಗೂ ಚಿಕ್ಕಪ್ಪನ ಜೊತೆ ವಿನೀಶ್ (Vinish Darshan)ಖುಷಿಯಲ್ಲಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

vijayalakshmi 1 1

ಇನ್ನೂ ನಿನ್ನೆ (ಜ.14) ಸಂಜೆ ವೇಳೆಗೆ ನಟ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಸಂಕ್ರಾಂತಿ ವಿಶ್ ಮಾಡಿದ್ದರು. ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಜೈಲಿನಿಂದ ಆಚೆ ಬಂದ ಬಳಿಕ ದರ್ಶನ್ ಮೊದಲ ಪೋಸ್ಟ್ ಹಂಚಿಕೊಂಡಿದ್ದರು. ಇದಕ್ಕೆ ಫ್ಯಾನ್ಸ್ ಸಂಭ್ರಮಪಟ್ಟಿದ್ದಾರೆ.

Share This Article