ಪ್ಯಾರಿಸ್: ವಿನೇಶ್ ಫೋಗಟ್ (Vinesh Phogat) ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯವನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉಕ್ರೇನ್‌ನ (3 ಬಾರಿ CWG ಚಿನ್ನದ ಪದಕ ವಿಜೇತೆ) ಒಕ್ಸಾನಾ ಲಿವಾಚ್ ಅವರನ್ನು 7-5 ರಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು. ಇದನ್ನೂ ಓದಿ: Paris Olympics Javelin Throw: ಮೊದಲ ಎಸೆತದಲ್ಲೇ ನೀರಜ್ ಚೋಪ್ರಾ ಫೈನಲ್‌ಗೆ ಜಂಪ್
ಇದು ವಿನೇಶ್ ಅವರ ಚೊಚ್ಚಲ ಒಲಿಂಪಿಕ್ ಸೆಮಿಫೈನಲ್ ಆಗಿದೆ. ಫೈನಲ್ ಸ್ಥಾನಕ್ಕಾಗಿ ಕ್ಯೂಬಾದ ಯೂಸ್ನಿಲಿಸ್ ಗುಜ್ಮನ್ ಅವರನ್ನು ಎದುರಿಸಲಿದ್ದಾರೆ. ಗುಜ್ಮನ್ ಅವರು ಪ್ಯಾನ್ ಅಮೆರಿಕನ್ ಗೇಮ್ಸ್ 2023 ರಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ.
ಇದಕ್ಕೂ ಮುನ್ನ ವಿನೇಶ್, ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್‌ಗೆ ಅರ್ಹತೆ ಪಡೆದಿದ್ದರು. ಜಪಾನಿನ ಕುಸ್ತಿಪಟು ಹಾಲಿ ಒಲಿಂಪಿಕ್ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದರು. ಟೋಕಿಯೊ ಗೇಮ್ಸ್‌ನಲ್ಲಿ ಒಂದೇ ಒಂದು ಅಂಕ ಬಿಟ್ಟುಕೊಡದೆ ಚಿನ್ನ ಗೆದ್ದಿದ್ದರು. ಇದನ್ನೂ ಓದಿ: Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!