ಹರಿಯಾಣ ಚುನಾವಣೆ ಸ್ಪರ್ಧೆಗೆ ವಿನೇಶ್‌ ಫೋಗಟ್‌ಗೆ ಕಾಂಗ್ರೆಸ್‌ ಟಿಕೆಟ್‌

Public TV
1 Min Read
Vinesh Phogat Bajrang Punia

ಚಂಡೀಗಢ: ಪಕ್ಷ ಸೇರ್ಪಡೆ ಬೆನ್ನಲ್ಲೇ ಕುಸ್ತಿಪಟು ವಿನೇಶ್‌ ಫೋಗಟ್‌ಗೆ (Vinesh Phogat) ಹರಿಯಾಣ ಚುನಾವಣೆಯಲ್ಲಿ (Haryan Election) ಸ್ಪರ್ಧಿಸಲು ಕಾಂಗ್ರೆಸ್‌ (Congress) ಟಿಕೆಟ್‌ ನೀಡಿದೆ.

ಹರಿಯಾಣದ ಜುಲಾನಾದಿಂದ ಫೋಗಟ್‌ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗರ್ಹಿ ಸಂಪ್ಲಾ-ಕಿಲೋಯ್ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಉದಯ್ ಭಾನ್ ಹೊಡಾಲ್‌ನಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಚುನಾವಣೆಗೆ 31 ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: Haryana Assembly Elections | ಟಿಕೆಟ್ ಸಿಗದ್ದಕ್ಕೆ ಇನ್ನೇನ್ ಮಾಡ್ಲಿ ಎಂದು ಕಣ್ಣೀರಿಟ್ಟ ಬಿಜೆಪಿ ಮಾಜಿ ಶಾಸಕ

vinesh phogat and bajrang punia with mallikarjun kharge scaled

ಲಾಡ್ವಾದಿಂದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ವಿರುದ್ಧ ಕಾಂಗ್ರೆಸ್‌ನ ಮೇವಾ ಸಿಂಗ್ ಕಣಕ್ಕಿಳಿಯಲಿದ್ದಾರೆ. ಸುರೇಂದರ್ ಪನ್ವಾರ್ ಸೋನಿಪತ್‌ನಿಂದ, ಭರತ್ ಭೂಷಣ್ ಬಾತ್ರಾ ರೋಹ್ಟಕ್‌ನಿಂದ, ಕುಲದೀಪ್ ವಾಟ್ಸ್ ಬದ್ಲಿಯಿಂದ, ಚಿರಂಜೀವ್ ರಾವ್ ರೆವರಿಯಿಂದ ಮತ್ತು ನೀರಜ್ ಶರ್ಮಾ ಫರಿದಾಬಾದ್ ಎನ್‌ಐಟಿಯಿಂದ ಸ್ಪರ್ಧಿಸಲಿದ್ದಾರೆ.

ಕುಸ್ತಿಪಟುಗಳಾದ ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ ಶುಕ್ರವಾರ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. ಇದನ್ನೂ ಓದಿ: ಭಾರತೀಯ ರೈಲ್ವೆಗೆ ಗುಡ್‌ಬೈ ಹೇಳಿ ಕಾಂಗ್ರೆಸ್‌ ಸೇರಿದ ವಿನೇಶ್‌ ಫೋಗಟ್‌

Share This Article