– ಕಾಳಜಿ ಇದ್ದಿದ್ದರೆ ವೀಡಿಯೋ ಮಾಡದೇ ಕ್ರೀಡಾಪಟುಗಳನ್ನ ಅಭಿನಂದಿಸಬಹುದಿತ್ತು ಎಂದ ವಿನೇಶ್
ಚಂಡೀಗಢ: ಪ್ಯಾರಿಸ್ ಒಲಿಂಪಿಕ್ಸ್‌ನಿಂದ (Paris Olympics 2024) ನಾನು ಅನರ್ಹಗೊಂಡ ನಂತರ ಮೋದಿ (PM Modi) ಮಾತನಾಡಲು ಮುಂದಾಗಿದ್ದರು. ಆದರೆ ನಾನೇ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನು ಮಾತನಾಡಿದ್ದರೇ ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎಂದು ವಿನೇಶ್ ಫೋಗಟ್ (Vinesh Phogat) ಹೇಳಿಕೊಂಡಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಗೆ (Haryana assembly Poll) ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಿರುವ ವಿನೇಶ್ ಒಲಿಂಪಿಕ್ಸ್ ದಿನಗಳನ್ನು ಮತ್ತೊಮ್ಮೆ ನೆನೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ನಂತರ ಪ್ರಧಾನಿ ಮೋದಿ ನನ್ನೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಮುಂದಾಗಿದ್ದರು. ಆದ್ರೆ ನಾನೇ ಮಾತನಾಡಲು ನಿರಾಕರಿಸಿದ್ದೆ ಎಂದಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್
ಪ್ರಧಾನಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಲು ನಿರಾಕರಿಸಿದ್ದೆ. ಏಕೆಂದರೆ ನಾನೂ ಮಾತನಾಡಿದ್ದರೆ, ಆ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಈ ಬಗ್ಗೆ ಮುಂಚೆಯೇ ನನಗೆ ಹೇಳಿದ್ದರು. ಮೋದಿ ಅವರೊಂದಿಗಿನ ಸಂವಾದವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಲು ರೆಕಾರ್ಡ್ ಮಾಡಲಾಗುತ್ತದೆ ಎಂದು ಹೇಳಿದ್ದರು. ನನ್ನ ಭಾವನೆಗಳು, ನನ್ನ ಕಠಿಣ ಪರಿಶ್ರಮ, ಸೋಷಿಯಲ್ ಮೀಡಿಯಾದಲ್ಲಿ ಗೇಲಿ ಮಾಡುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಪ್ರಧಾನಿ ಜೊತೆ ಮಾತನಾಡಲು ನಿರಾಕರಿಸಿದೆ. ಪ್ರಚಾರಕ್ಕಾಗಿ ಯಾವುದೇ ಷರತ್ತುಗಳಿಲ್ಲದೇ ಪ್ರಧಾನಿಯೊಂದಿಗಿನ ಸಂಭಾಷಣೆಯನ್ನು ನಾನು ಪ್ರಸಂಶಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಪ್ಯಾರಿಸ್‌ನಲ್ಲಿ ಪದಕ ಗೆದ್ದ ಎಲ್ಲಾ ಅಥ್ಲಿಟ್‌ಗಳಿಗೆ ಪ್ರಧಾನಿ ಮೋದಿ ಕರೆ ಮಾಡಿ ಸಂವಾದ ನಡೆಸಿ ಅವರ ಪ್ರಯತ್ನಗಳಿಗಾಗಿ ಅಭಿನಂದಿಸಿದರು. ಅವರಿಗೆ ನಿಜವಾಗಿಯೂ ಕ್ರೀಡಾಪಟುಗಳ ಬಗ್ಗೆ ಕಾಳಜಿ ಇದ್ದಿದ್ದರೆ, ಅದನ್ನ ರೆಕಾರ್ಡ್ ಮಾಡದೆಯೇ ಕರೆ ಮಾಡಿ ಅಭಿನಂದನೆ ಸಲ್ಲಿಸಬಹುದಿತ್ತು, ಅದಕ್ಕೆ ನಾನೂ ಕೃತಜ್ಞಳಾಗಿರುತ್ತಿದ್ದೆ. ಅಲ್ಲದೇ ನನ್ನೊಂದಿಗೆ ಮಾತನಾಡಿದ್ರೆ, ಕಳೆದ 2 ವರ್ಷಗಳ ಹಿಂದಿನ ಘಟನೆಯನ್ನು ಕೆದಕುತ್ತಾಳೆ ಅನ್ನೋದು ಅರಿವಿಗೆ ಬಂದಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಕೊಡಗಿಗೆ, ಕೊಡಗಿನಿಂದ ದುಬೈಗೆ ಹೈಡ್ರೋ ಗಾಂಜಾವಸ್ತು ರವಾನೆ – ಅಂತಾರಾಷ್ಟ್ರೀಯ ಪೆಡ್ಲರ್‌ಗಳ ಜಾಲ ಬೇಧಿಸಿದ ಪೊಲೀಸರು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಅನರ್ಹಗೊಂಡಿದ್ದೇಕೆ?
ಮಹಿಳಾ ಕುಸ್ತಿಪಟು ವಿಭಾಗದಲ್ಲಿ ಇದೇ ಮೊದಲಬಾರಿಗೆ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ವಿನೇಶ್ ಫೋಗಟ್ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದರು. ಆದ್ರೆ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ವಿನೇಶ್ 150 ಗ್ರಾಂ ತೂಕ ಅಧಿಕವಿದ್ದದ ಕಾರಣ ಅವರನ್ನು ಅನರ್ಹಗೊಳಿಸಲಾಗಿತ್ತು.