‘ಬಿಗ್ ಬಾಸ್’ ಖ್ಯಾತಿಯ ವಿನಯ್ (Vinay Gowda) ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಇಂದು (ಮಾ.29) ಜೈಲಿಂದ (Jail) ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್‌ಗೆ ವಿನಯ್ ಕ್ಷಮೆಯಾಚಿಸಿದ್ದಾರೆ. ಮಚ್ಚು ಹಿಡಿದು ರೀಲ್ಸ್ ಮಾಡಬಾರದಿತ್ತು, ನನ್ನಿಂದ ತಪ್ಪಾಗಿದೆ ಎಂದಿದ್ದಾರೆ. ಇದನ್ನೂ ಓದಿ:KD ಲೇಡಿ ರೀಷ್ಮಾಗೆ ‘ಸೆಟ್ ಆಗೋಲ್ಲ ಹೋಗೆ ನಂಗು ನಿಂಗು’ ಎಂದ ಧ್ರುವ ಸರ್ಜಾ
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿ, ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳ್ತೀನಿ. ಕಳೆದ ನಾಲ್ಕು ದಿನದಿಂದ ನೀವು ಟಿವಿಯಲ್ಲಿ ನೋಡಿರಬಹುದು. ಒಂದು ಮಚ್ಚಿನ ಕಥೆ ನಡೆಯುತ್ತಿದೆ. ಪ್ರತಿ ಒಬ್ಬರಿಗೂ ನನ್ನ ಫ್ಯಾಮಿಲಿ ಹಾಗೂ ಫ್ಯಾನ್ಸ್‌ಗೆ ಕ್ಷಮೆ ಕೇಳಬೇಕು ಅಂತಾನೇ ವಿಡಿಯೋ ಮಾಡ್ತಿದ್ದೀನಿ. ನನ್ನಿಂದ ನನ್ನ ಹೆಂಡತಿ, ಮಗ, ಸ್ನೇಹಿತರಿಗೆ ತೊಂದರೆ ಆಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಎಂದು ಸಂಕಷ್ಟದ ಸಮಯದಲ್ಲಿ ನಿಂತವರಿಗೆ ವಿನಯ್ ಕೃತಜ್ಞತೆ ಸಲ್ಲಿಸಿದ್ದಾರೆ. ನನ್ನಿಂದ ತಪ್ಪಾಗಿದೆ ಮಚ್ಚು ಇಟ್ಕೊಂಡು ರೀಲ್ಸ್ ಮಾಡಬಾರದಿತ್ತು. ನನ್ನ ಎಚ್ಚರಿಕೆಯಲ್ಲಿ ನಾನು ಇರಬೇಕಾಗಿತ್ತು. ನಾನು ಈ ರೀತಿ ಮೆಸೇಜ್ ನನ್ನ ಫಾಲೋವರ್ಸ್‌ಗೆ ಕೊಡಬಾರದಿತ್ತು ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:ಗೆಲುವಿನ ನಿರೀಕ್ಷೆಯಲ್ಲಿ ಸಲ್ಮಾನ್ ಖಾನ್- ರಶ್ಮಿಕಾ ಜೊತೆಗಿನ ‘ಸಿಕಂದರ್’ ಚಿತ್ರ ನಾಳೆ ರಿಲೀಸ್
- Advertisement -
View this post on Instagram
- Advertisement -
ಪೊಲೀಸ್ ಇಲಾಖೆ ಅವರು ಸರಿಯಾಗಿ ತನಿಖೆ ಮಾಡಿದ್ದಾರೆ. ಕಾಮನ್ ಮ್ಯಾನ್ ಸೆಲೆಬ್ರಿಟಿ ಅಂತ ನೋಡದೆ, ತನಿಖೆ ಮಾಡಿದ್ದಾರೆ. ನಮ್ಮನ್ನು ಚೆನ್ನಾಗಿ ಟ್ರೀಟ್ ಮಾಡಿದ್ದಾರೆ. ದಯವಿಟ್ಟು ಪೊಲೀಸ್ ಅವರ ಮೇಲೆ ಯಾವುದೇ ಆರೋಪ ಮಾಡಬೇಡಿ. ಕಾಮನ್ ಮ್ಯಾನ್ ಹಾಗೆಯೇ ನಮ್ಮನ್ನ ಟ್ರೀಟ್ ಮಾಡಿದ್ದಾರೆ. ಇನ್ನೂ ಪೊಲೀಸ್ ಅವರು ನಮ್ಮಿಂದ ಹಣ ಪಡೆದಿದ್ದಾರೆ ಅನ್ನೋದೆಲ್ಲ ಸುಳ್ಳು ವದಂತಿ ಎಂದಿದ್ದಾರೆ. ಪೊಲೀಸರು ನಮಗೆ ಹಾಗೆಯೇ ಮಾಡಿಲ್ಲ. ಕಾನೂನು ಬದ್ಧವಾಗಿ ತನಿಖೆ ಮಾಡಿದ್ದಾರೆ ಎನ್ನುತ್ತಾ ಅಧಿಕಾರಿ ಎಸಿಪಿ ಚಂದನ್ ಸರ್ ಅವರ ತಂಡಕ್ಕೆ ವಿನಯ್ ಧನ್ಯವಾದ ಹೇಳಿದ್ದಾರೆ.
- Advertisement -
- Advertisement -
ನಮ್ಮಿಂದ ಗೊತ್ತಿಲ್ಲದೇ ಆಗಿರೋ ತಪ್ಪಿಗೆ ತಿದ್ದಿ ಬುದ್ಧಿ ಹೇಳಿದ್ದೀರಾ. ಇನ್ನೊಂದು ಸಲ ಈ ತರ ತಪ್ಪು ನಾನೆಂದು ಮಾಡಲ್ಲ. ಸಾಮಾನ್ಯರೊಂದಿಗೆ ಪೊಲೀಸರು ಹೇಗೆ ನಡೆದುಕೊಳ್ತಾರೋ, ಹಾಗೆ ನಮ್ಮೊಂದಿಗೂ ನಡೆದುಕೊಳ್ತಾರೆ. ಎಲ್ಲೂ ನಮ್ಮೊಂದಿಗೆ ತಪ್ಪಾಗಿ ನಡೆದುಕೊಂಡಿಲ್ಲ ಎಂದಿದ್ದಾರೆ. ಮತ್ತೊಮ್ಮೆ ಅಭಿಮಾನಿಗಳಿಗೆ ನಟ ಕ್ಷಮೆಯಾಚಿಸಿದ್ದಾರೆ. ರೀಲ್ಸ್ ನಾನು ಫೈಬರ್ ಮಚ್ಚು ಬಳಸಿದ್ದೆ, ಆ ಪ್ರಾಪರ್ಟಿ ನನ್ನದಲ್ಲ. ಅದು ರಜತ್ ಅವರದಾಗಿತ್ತು. ನನಗೆ ಕೊಟ್ಟಿದ್ದು ಪುಷ್ಪರಾಜ್ ಕ್ಯಾರೆಕ್ಟರ್, ಅದಕ್ಕೆ ನಾನು ಬೀಡಾ ಬಳಸಿ ರೀಲ್ಸ್ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಹಾಗೂ ರಜತ್‌ರನ್ನು ಬಂಧಿಸಲಾಗಿತ್ತು. ನಿನ್ನೆ ಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ಜಾಮೀನು ಮಂಜೂರು ಮಾಡಿತ್ತು. ಬೇಲ್ ಪ್ರತಿ ಪೊಲೀಸರಿಗೆ ತಡವಾಗಿ ಸಿಕ್ಕ ಹಿನ್ನೆಲೆ ಇಂದು ಜೈಲಿನಿಂದ ವಿಜಯ್ ಮತ್ತು ರಜತ್ ರಿಲೀಸ್ ಆಗಿದ್ದಾರೆ.